ಹಾಲಿ ಚಾಂಪಿಯನ್ ಕೊಂಟಾ ಹೊರಕ್ಕೆ
ಸಿಡ್ನಿ ಇಂಟರ್ನ್ಯಾಶನಲ್ ಟೂರ್ನಮೆಂಟ್
ಸಿಡ್ನಿ, ಜ.9: ಹಾಲಿ ಚಾಂಪಿಯನ್ ಬ್ರಿಟನ್ನ ಜೋಹಾನ್ನ ಕೊಂಟಾ ಅವರು ಸಿಡ್ನಿ ಇಂಟರ್ ನ್ಯಾಶನಲ್ ಟೆನಿಸ್ ಟೂರ್ನಮೆಂಟ್ನ ಮಹಿಳೆಯರ ವಿಭಾಗದ ಸಿಂಗಲ್ಸ್ನ ಮೊದಲ ಪಂದ್ಯದಲ್ಲಿ ಸೋತು ನಿರ್ಗಮಿಸಿದ್ದಾರೆ. ಒಲಿಂಪಿಕ್ಸ್ ಟೆನಿಸ್ ಸೆಂಟರ್ನಲ್ಲಿ ನಡೆದ ಪಂದ್ಯದಲ್ಲಿ ಕೊಂಟಾ ಅವರನ್ನು ಪೋಲೆಂಡ್ನ ಅಗ್ನೀಸ್ಕಾ ರಾದ್ವಂಸ್ಕಾ ಅವರು 6-3 ,7-5 ಅಂತರದಿಂದ ಸೋಲಿಸಿದ್ದಾರೆ.
Next Story