varthabharthi

ಕ್ರೀಡೆ

ಲಂಕಾದ ಏಕದಿನ, ಟ್ವೆಂಟಿ-20ತಂಡಕ್ಕೆ ಮ್ಯಾಥ್ಯೂಸ್ ನಾಯಕ

ವಾರ್ತಾ ಭಾರತಿ : 10 Jan, 2018

ಕೊಲಂಬೊ, ಜ.9:ಶ್ರೀಲಂಕಾದ ಆಲ್‌ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ಶ್ರೀಲಂಕಾದ ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್ ತಂಡಕ್ಕೆ ನಾಯಕರಾಗಿ ಮ್ಯಾಥ್ಯೂಸ್ ನೇಮಕಗೊಂಡಿದ್ದಾರೆ.

30ರ ಹರೆಯದ ಮ್ಯಾಥ್ಯೂಸ್ ಅವರು ಕಳೆದ ವರ್ಷ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಶ್ರೀಲಂಕಾ ತಂಡ ತವರಿನಲ್ಲಿ ಆಘಾತಕಾರಿ ಸೋಲು ಅನುಭವಿಸಿದ ಬಳಿಕ ಬಳಿಕ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

ಈ ಸಂದರ್ಭದಲ್ಲಿ ಲಂಕಾ ಕ್ರಿಕೆಟ್ ಮಂಡಳಿಯು ದಿನೇಶ ಚಾಂಡಿಮಲ್ ಅವರನ್ನು ಟೆಸ್ಟ್ ತಂಡಕ್ಕೆ ಮತ್ತು ತಿಸ್ಸರಾ ಪೆರೇರಾ ಅವರನ್ನು ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕರಾಗಿ ನೇಮಕ ಮಾಡಿತ್ತು.

 ತಿಸ್ಸರಾ ಪೆರೇರಾ ಅವರು ಭಾರತ ವಿರುದ್ಧದ ಸರಣಿಯಲ್ಲಿ 1-2 ಅಂತರದಲ್ಲಿ ಸರಣಿ ಕಳೆದುಕೊಂಡ ಬಳಿಕ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ತೆರವಾದ ಸ್ಥಾನಕ್ಕೆ ಮತ್ತೆ ಮ್ಯಾಥ್ಯೂಸ್ ಅವರಿಗೆ ಅವಕಾಶ ನೀಡಿದೆ.

 ಆ್ಯಂಜೆಲೊ ಮ್ಯಾಥ್ಯೂಸ್ ಅವರು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 2019ರಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲೂ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

 

Comments (Click here to Expand)