varthabharthi

ಗಲ್ಫ್ ಸುದ್ದಿ

ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸೋದರನ ಮದುವೆಗೆ ಆಮಂತ್ರಿಸಿದ ಎಕ್ಸ್ಪರ್ಟೈಸ್ ಗ್ರೂಪ್ ನ ಕೆ.ಎಸ್. ಶೇಖ್

ವಾರ್ತಾ ಭಾರತಿ : 10 Jan, 2018

ಬಹರೈನ್, ಜ. 10: ಸೌದಿ ಅರೇಬಿಯದ ಪ್ರತಿಷ್ಠಿತ ಎಕ್ಸ್ಪರ್ಟೈಸ್ ಕಾಂಟ್ರಕ್ಟಿಂಗ್ ಕಂಪೆನಿ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಕೆ.ಎಸ್. ಶೇಖ್ ಅವರು ಮಂಗಳವಾರ ಬಹರೈನ್ ನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ , ಸಂಸದ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. 

ಈ ಸಂದರ್ಭ ಮುಲ್ಕಿ ಸಮೀಪದ ಕರ್ನಿರೆಯಲ್ಲಿ ನಡೆಯಲಿರುವ ತನ್ನ ಕಿರಿಯ ಸಹೋದರ ಮುಹಮ್ಮದ್ ಅನ್ಶಿಫ್ ಅವರ ವಿವಾಹ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನ ಪತ್ರಿಕೆಯನ್ನು ರಾಹುಲ್ ಗಾಂಧಿ ಅವರಿಗೆ ಕೆ.ಎಸ್. ಶೇಖ್ ಅವರು ನೀಡಿದರು. 

ಆಹ್ವಾನ ಪತ್ರಿಕೆ ಸ್ವೀಕರಿಸಿದ ರಾಹುಲ್ ಗಾಂಧಿ ಅನ್ಶಿಫ್ ರಿಗೆ ಶುಭ ಆರೈಸಿದರು. 

ಈ ಸಂದರ್ಭ ಮುಹಮ್ಮದ್ ಅನ್ಶಿಫ್, ರಾಜಿವ್ ಗಾಂಧಿ ಆರೋಗ್ಯ ವಿವಿ  ಸೆನೆಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)