varthabharthi

ಕ್ರೀಡೆ

ಆಸ್ಟ್ರೇಲಿಯನ್ ಓಪನ್ ಕ್ವಾಲಿಫೈಯರ್‌

ಭಾಂಬ್ರಿ, ರಾಮ್‌ಕುಮಾರ್ 2ನೇ ಸುತ್ತಿಗೆ ಪ್ರವೇಶ

ವಾರ್ತಾ ಭಾರತಿ : 11 Jan, 2018

ಮೆಲ್ಬೋರ್ನ್, ಜ.10: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ರಾದ ಯೂಕಿ ಭಾಂಬ್ರಿ ಹಾಗೂ ರಾಮ್‌ಕುಮಾರ್ ರಾಮನಾಥನ್ ಆಸ್ಟ್ರೇಲಿಯನ್ ಓಪನ್ ಕ್ವಾಲಿಫೈಯರ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಸುಮಿತ್ ನಗರ್ ಹಾಗೂ ಪ್ರಜ್ಞೇಶ್ ಸವಾಲು ಅಂತ್ಯಗೊಂಡಿದೆ.

  15ನೇ ಶ್ರೇಯಾಂಕದ ಭಾಂಬ್ರಿ ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ಕೆನಡಾದ ಬ್ರಾಡ್ಲಿ ಸ್ಚುನೆರ್‌ರನ್ನು 1-6, 6-3, 6-4 ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಕಾರ್ಲೊಸ್ ಟಬೆರ್ನರ್‌ರನ್ನು ಎದುರಿಸಲಿದ್ದಾರೆ. 28ನೇ ಶ್ರೇಯಾಂಕದ ರಾಮ್‌ಕುಮಾರ್ ಅಮೆರಿಕದ ಬ್ರಾಡ್ಲಿ ಕ್ಲಾನ್‌ರನ್ನು 6-7(8), 7-6(3), 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಎರಡನೇ ಸುತ್ತಿನಲ್ಲಿ ಫ್ರಾನ್ಸ್‌ನ ಗ್ಲೆಬ್ ಸಖರೊವ್‌ರನ್ನು ಎದುರಿಸಲಿದ್ದಾರೆ. ಪ್ರಜ್ಞೇಶ್ ಉತ್ತಮ ಆರಂಭ ಪಡೆದಿದ್ದರೂ ಜರ್ಮನಿಯ ಟೊಬಿಯಸ್ ಕಾಮ್ಕೆ ವಿರುದ್ಧ 6-1, 1-6, 2-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಇತ್ತೀಚೆಗೆ ಪುಣೆಯಲ್ಲಿ ಚೊಚ್ಚಲ ಎಟಿಪಿ ವರ್ಲ್ಡ್ ಟೂರ್ ಪಂದ್ಯಾವಳಿಯಲ್ಲಿ ಆಡಿರುವ ನಗಾಲ್ ಇಟಲಿಯ ಅಲೆಸ್ಸಾಂಡ್ರೊ ಗಿಯಾನ್ನೆಸ್ಸಿ ವಿರುದ್ಧ 6-7(5), 6-3, 3-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)