varthabharthi

ಕ್ರೀಡೆ

ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌

ಸರಿತಾ,ಸೋನಿಯಾ ಸೆಮಿಫೈನಲ್‌ಗೆ

ವಾರ್ತಾ ಭಾರತಿ : 11 Jan, 2018
Varthabharathi

ರೋಹ್ಟಕ್, ಜ.10: ಮಾಜಿ ವಿಶ್ವ ಚಾಂಪಿಯನ್ ಎಲ್. ಸರಿತಾದೇವಿ(60 ಕೆ.ಜಿ.) ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸೋನಿಯಾ(57 ಕೆ.ಜಿ.) ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ. ಬುಧವಾರ ಇಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅಖಿಲ ಭಾರತ ಪೊಲೀಸ್ ತಂಡವನ್ನು ಪ್ರತಿನಿಧಿಸಿದ ಸರಿತಾದೇವಿ ಅರುಣಾಚಲ ಪ್ರದೇಶದ ಅಖ್ವಿಲ್ಲಿಯಾ ದೂಪಕ್‌ರನ್ನು ಮಣಿಸಿ ಪದಕದ ಸುತ್ತಿಗೆ ತಲುಪಿದರು. ರೈಲ್ವೆ ಸ್ಪೋರ್ಟ್ಸ್ ಪ್ರೊಮೋಶನ್ ಬೋರ್ಡ್‌ನ ಸೋನಿಯಾ ಉತ್ತರಖಂಡದ ಕಮಲಾ ಬಿಶ್ತ್‌ರನ್ನು 5-0 ಅಂತರದಿಂದ ಸೋಲಿಸಿದ್ದಾರೆ.

ಮಾಜಿ ವಿಶ್ವ ಚಾಂಪಿಯನ್ ನಿಖತ್ ಝರೀನ್(51 ಕೆಜಿ) ಛತ್ತೀಸ್‌ಗಡದ ಆಭಾ ಅವರನ್ನು ಮಣಿಸಿ ಸತತ ಎರಡನೇ ಪದಕವನ್ನು ಖಾತ್ರಿಪಡಿಸಿದ್ದಾರೆ. ಆರ್‌ಎಸ್‌ಪಿಬಿ ತಂಡದ ಪವಿತ್ರಾ(60ಕೆಜಿ)ಮಣಿಪುರದ ಚಾವೊಬಾ ದೇವಿ ಅವರನ್ನು ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸರ್ಜು ಬಾಲಾ ದೇವಿ(48 ಕೆಜಿ)ಮಧ್ಯಪ್ರದೇಶದ ದೀಪಾ ಕುಮಾರಿ ಅವರನ್ನು 5-0 ಅಂತರದಿಂದ ಸೋಲಿಸಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಶಿಕ್ಷಾ(54ಕೆಜಿ) ಟೂರ್ನಿಯಿಂದ ಹೊರ ನಡೆದಿದ್ದಾರೆ.

 

Comments (Click here to Expand)