varthabharthi

ಕ್ರೀಡೆ

ದಕ್ಷಿಣ ಆಫ್ರಿಕ ಕ್ರಿಕೆಟ್ ಪ್ರವಾಸ: ಭಾರತಕ್ಕೆ ಮಿಥಾಲಿ ನಾಯಕಿ

ವಾರ್ತಾ ಭಾರತಿ : 11 Jan, 2018
Varthabharathi

ಹೊಸದಿಲ್ಲಿ, ಜ.10: ಮುಂದಿನ ತಿಂಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ದಕ್ಷಿಣ ಆಫ್ರಿಕಕ್ಕೆ ಪ್ರವಾಸ ಕೈಗೊಳ್ಳಲಿರುವ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಮಿಥಾಲಿ ರಾಜ್ ಆಯ್ಕೆಯಾಗಿದ್ದಾರೆ. ಫೆ. 5 ರಂದು ಆರಂಭವಾಗಲಿರುವ ಏಕದಿನ ಸರಣಿಗೆ ಬಿಸಿಸಿಐ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಹರ್ಮನ್‌ಪ್ರೀತ್ ಕೌರ್ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಏಕದಿನ ಸರಣಿ ಕೊನೆಗೊಂಡ ತಕ್ಷಣ ಐದು ಪಂದ್ಯಗಳ ಟ್ವೆಂಟಿ-20 ಸರಣಿ ಆರಂಭವಾಗಲಿದೆ. ಈ ಸರಣಿಗೆ ಇನ್ನೂ ತಂಡ ಪ್ರಕಟಿಸಿಲ್ಲ.

ಭಾರತ ಮಹಿಳಾ ಏಕದಿನ ತಂಡ: ಮಿಥಾಲಿ ರಾಜ್(ನಾಯಕಿ), ಹರ್ಮನ್‌ಪ್ರೀತ್ ಕೌರ್(ಉಪನಾಯಕಿ),ಸುಶ್ಮಾ ವರ್ಮ(ವಿಕೆಟ್‌ಕೀಪರ್), ಎಕ್ತಾ ಬಿಶ್ತ್, ಸ್ಮತಿ ಮಂಧಾನಾ, ಪೂನಂ ಯಾದವ್, ಪೂನಂ ರಾವುತ್, ರಾಜೇಶ್ವರಿ ಗಾಯಕ್ವಾಡ್, ಜೆಮಿಯಾ ರೊಡ್ರಿಗಸ್, ಜುಲನ್ ಗೋಸ್ವಾಮಿ, ದೀಪ್ತಿ ಶರ್ಮ, ಶಿಖಾ ಪಾಂಡೆ, ಮೋನಾ ಮೆಶ್ರಂ, ಪೂಜಾ ವಸ್ತ್ರಕರ್, ವೇದಾ ಕೃಷ್ಣಮೂರ್ತಿ, ತಾನಿಯಾ ಭಾಟಿಯಾ(ವಿಕೆಟ್‌ಕೀಪರ್).

 

Comments (Click here to Expand)