varthabharthi

ಕ್ರೀಡೆ

ಧವನ್-ವಿಜಯ್ ಆರಂಭಿಕ ಸ್ಥಾನಕ್ಕೆ ಕುತ್ತು?

ವಾರ್ತಾ ಭಾರತಿ : 11 Jan, 2018
Varthabharathi

ಕೇಪ್‌ಟೌನ್, ಜ.10: ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಇನಿಂಗ್ಸ್ ಆರಂಭಿಸಿದ್ದ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ದ್ವಿತೀಯ ಟೆಸ್ಟ್ ನಲ್ಲಿ ಇನಿಂಗ್ಸ್ ಆರಂಭಿಸುವ ಬಗ್ಗೆ ಸಂಶಯ ಕಾಡಲಾರಂಭಿಸಿದೆ. ಕರ್ನಾಟಕದ ದಾಂಡಿಗ ಕೆ.ಎಲ್. ರಾಹುಲ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಚೆನ್ನೈ ದಾಂಡಿಗ ವಿಜಯ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಧವನ್ ಮೊದಲ ಟೆಸ್ಟ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ಅನುಭವಿ ಆಟಗಾರ ವಿಜಯ್ ಪ್ರದರ್ಶನವೂ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಭಾರತ 2013ರ ಡಿಸೆಂಬರ್‌ನಲ್ಲಿ ಕೊನೆಯ ಬಾರಿ ದಕ್ಷಿಣ ಆಫ್ರಿಕಕ್ಕೆ ಪ್ರವಾಸ ಕೈಗೊಂಡಿದ್ದು, ಆಗ 2 ಪಂದ್ಯಗಳಲ್ಲಿ ಆಡಿದ್ದ ಭಾರತ ಒಂದರಲ್ಲಿ ಜಯ ಸಾಧಿಸಿದ್ದರೆ ಮತ್ತೊಂದು ಪಂದ್ಯವನ್ನು 10 ವಿಕೆಟ್‌ಗಳಿಂದ ಸೋತಿತ್ತು. ಆ ಎರಡು ಪಂದ್ಯಗಳಲ್ಲಿ ಧವನ್ ಹಾಗೂ ವಿಜಯ್ ಇನಿಂಗ್ಸ್ ಆರಂಭಿಸಿದ್ದರು. ವಿಜಯ್ ಡರ್ಬನ್‌ನಲ್ಲಿ ನಡೆದಿದ್ದ 2ನೇ ಟೆಸ್ಟ್‌ನಲ್ಲಿ 97 ರನ್ ಗಳಿಸಿದ್ದರು. ಆದರೆ ಧವನ್ ರನ್‌ಗಾಗಿ ಪರದಾಟ ನಡೆಸಿದ್ದರು.

 

Comments (Click here to Expand)