varthabharthi

ಕ್ರೀಡೆ

ಇಂಡಿಯಾ ಓಪನ್ ಬಾಕ್ಸಿಂಗ್: ಕ್ಯೂಬಾ, ರಶ್ಯ ಭಾಗಿ

ವಾರ್ತಾ ಭಾರತಿ : 11 Jan, 2018

ಹೊಸದಿಲ್ಲಿ, ಜ.10: ಅತ್ಯಂತ ಶ್ರೀಮಂತ ಬಾಕ್ಸಿಂಗ್ ಟೂರ್ನಮೆಂಟ್ ಇಂಡಿಯಾ ಓಪನ್‌ನಲ್ಲಿ ಸಾಂಪ್ರದಾಯಿಕ ಶ್ರೇಷ್ಠ ಬಾಕ್ಸಿಂಗ್ ದೇಶಗಳಾದ ಕ್ಯೂಬಾ ಹಾಗೂ ರಶ್ಯ ಸಹಿತ ಹಲವು ರಾಷ್ಟ್ರಗಳು ಭಾಗವಹಿಸಲಿವೆ.

100,000 ಡಾಲರ್ ಬಹುಮಾನ ಮೊತ್ತದ ಇಂಡಿಯಾ ಓಪನ್ ಟೂರ್ನಿಯು ಜ.28 ರಿಂದ ಆರಂಭವಾಗಲಿದೆ.

‘‘ಇಂಡಿಯಾ ಓಪನ್ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್ ಆಗಿದ್ದು, ಇದು ದಿಲ್ಲಿಯಲ್ಲಿ ನಡೆಯಲಿದೆ. ಕ್ಯೂಬಾ, ಕಝಕ್‌ಸ್ತಾನ, ಉಜ್ಬೇಕಿಸ್ತಾನ ಹಾಗೂ ರಶ್ಯ ಸಹಿತ 25 ದೇಶಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿವೆ’’ ಎಂದು ಭಾರತದ ಬಾಕ್ಸಿಂಗ್ ಸಂಘಟನೆಯ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.

ಭಾರತ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳನ್ನು ಸ್ಪರ್ಧೆಗಿಳಿಸಲಿದೆ. ಪುರುಷರ ಹಾಗೂ ಮಹಿಳಾ ಬಾಕ್ಸರ್‌ಗಳು ತ್ಯಾಗರಾಜ್ ಸ್ಟೇಡಿಯಂನಲ್ಲಿ ಸೆಣಸಾಡಲಿದ್ದಾರೆ.

 ಚಿನ್ನ ಪದಕ ವಿಜೇತರು 2500 ಡಾಲರ್, ಬೆಳ್ಳಿ ಹಾಗೂ ಕಂಚು ಪದಕ ವಿಜೇತರುಗಳು ಕ್ರಮವಾಗಿ 1000 ಹಾಗೂ 500 ಡಾಲರ್ ಬಹುಮಾನ ಪಡೆಯಲಿದ್ದಾರೆ.

 ‘‘ಭಾರತ ನಾಲ್ಕು ತಂಡಗಳನ್ನು ಕಣಕ್ಕಿಳಿಸಲಿದ್ದು, ನಮ್ಮ ಆಟಗಾರರಿಗೆ ವಿಶ್ವ ಶ್ರೇಷ್ಠ ಆಟಗಾರರ ವಿರುದ್ಧ ಆಡುವ ಅನುಭವ ಸಿಗಲಿದೆ. ಈ ವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಹಾಗೂ ಇತರ ಚಾಂಪಿಯನ್‌ಶಿಪ್‌ಗೆ ಇದು ಉತ್ತಮ ತಯಾರಿಯಾಗಿದೆ’’ ಎಂದು ಸಿಂಗ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)