varthabharthi

ಕ್ರೀಡೆ

ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿ

ಮುಗುರುಝ, ರಾಂಡ್ವಾಂಸ್ಕಾ ಕ್ವಾರ್ಟರ್ ಫೈನಲ್‌ಗೆ

ವಾರ್ತಾ ಭಾರತಿ : 11 Jan, 2018
Varthabharathi

ಸಿಡ್ನಿ, ಜ.10: ವಿಂಬಲ್ಡನ್ ಚಾಂಪಿಯನ್ ಗಾರ್ಬೈನ್ ಮುಗುರುಝ ಹಾಗೂ ಪೊಲೆಂಡ್‌ನ ಅಗ್ನೆಸ್ಕಾ ರಾಂಡ್ವಾಂಸ್ಕಾ ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

 ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮುಗುರುಝ ಅವರು ಕಿಕಿ ಬೆರ್ಟನ್ಸ್‌ರನ್ನು 6-3, 7-6(6) ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದರು.

ಮುಗುರುಝ ಮುಂದಿನ ಸುತ್ತಿನಲ್ಲಿ ಮತ್ತೊಂದು ಪಂದ್ಯದಲ್ಲಿ ಜಯ ಸಾಧಿಸುವ ಡರಿಯಾ ಗವ್ರಿಲೋವಾ ಅಥವಾ ಸಮಂತಾ ಸ್ಟೋಸರ್‌ರನ್ನು ಎದುರಿಸಲಿದ್ದಾರೆ. ಮಹಿಳೆಯರ ಸಿಂಗಲ್ಸ್ ಮತ್ತೊಂದು ಪಂದ್ಯದಲ್ಲಿ ಅಗ್ನೆಸ್ಕಾ ರಾಂಡ್ವಾಂಸ್ಕಾ ಅವರು ಅಮೆರಿಕದ ಕ್ವಾಲಿಫೈಯರ್ ಕ್ಯಾಥರಿನ್ ಬೆಲ್ಲಿಸ್ ವಿರುದ್ಧ 7-6(4), 6-0 ಅಂತರದಿಂದ ಜಯ ಸಾಧಿಸಿದ್ದಾರೆ.

ರಾಂಡ್ವಾಂಸ್ಕಾ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಅಥವಾ ಇಟಲಿಯ ಕ್ಯಾಮಿಲಾ ಗಿಯೊರ್ಗಿ ಅವರನ್ನು ಎದುರಿಸಲಿದ್ದಾರೆ.

28ರ ಹರೆಯದ ರಾಂಡ್ವಾಂಸ್ಕಾ ಇದೀಗ ನಾಲ್ಕನೇ ಬಾರಿ ಸಿಡ್ನಿಯಲ್ಲಿ ನಡೆದ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

 

Comments (Click here to Expand)