varthabharthi

ಕ್ರೀಡೆ

ರಾಷ್ಟ್ರೀಯ ಮಟ್ಟದ ಬಾಕ್ಸರ್ ಈಗ ಟ್ಯಾಕ್ಸಿ ಡ್ರೈವರ್!

ವಾರ್ತಾ ಭಾರತಿ : 11 Jan, 2018
Varthabharathi

ಲುಧಿಯಾನ, ಜ.11: ರಾಷ್ಟ್ರಮಟ್ಟದ ಮಾಜಿ ಬಾಕ್ಸರ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತ ಲಾಖಾ ಸಿಂಗ್ ಈಗ ಪಂಜಾಬ್‌ನ ಲುಧಿಯಾನದಲ್ಲಿ ಜೀವನ ನಿರ್ವಹಣೆಗೆ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

ಮಾಜಿ ಯೋಧನಾಗಿರುವ ಸಿಂಗ್ ಸರಕಾರ ಹಾಗೂ ಸೇನೆಯಿಂದ ಸಹಾಯದ ನಿರೀಕ್ಷೆಯಲಿದ್ದಾರೆ.

‘‘ನಾನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಜಯಿಸಿದ್ದೇನೆ. ಆದರೆ, ನನಗೆ ವಂಚನೆಯಾಗಿದೆ. ಚಾಂಪಿಯನ್‌ಶಿಪ್‌ನ ವೇಳೆ ಟೆಕ್ಸಾಸ್ ಏರ್‌ಪೋರ್ಟ್‌ನಲ್ಲಿ ನನ್ನನ್ನು ವಶಪಡಿಸಿಕೊಳ್ಳಲಾಗಿತ್ತು. ನಾನು ಪಲಾಯನಗಾರ ಎಂದು ಸೇನೆ ಘೋಷಿಸಿತ್ತು. ಸರಕಾರ ಹಾಗೂ ಆರ್ಮಿ ನನಗೆ ಸಹಾಯ ಮಾಡಬೇಕೆಂದು ಮನವಿ ಮಾಡುತ್ತಿದ್ದೇನೆ’ಎಂದು ಸಿಂಗ್ ಹೇಳಿದ್ದಾರೆ.

ಸಿಂಗ್ ಅವರು ಸಿಖ್ ವಿರೋಧಿ ದಂಗೆಯ ವೇಳೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು.

1998ರಲ್ಲಿ ಸಿಂಗ್ ವಿಶ್ವ ಮಿಲಿಟರಿ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಸಿಂಗ್ ಅವರನ್ನು ಸೇನೆ ಪಲಾಯನಗಾರ ಎಂದು ಘೋಷಣೆ ಮಾಡಿದ್ದ ಕಾರಣ ಅವರನ್ನು ಟೆಕ್ಸಾಸ್ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿತ್ತು.

 

Comments (Click here to Expand)