varthabharthi

ಕ್ರೀಡೆ

ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್

ಸರಿತಾ, ಸೋನಿಯಾ ಫೈನಲ್‌ಗೆ ಪ್ರವೇಶ

ವಾರ್ತಾ ಭಾರತಿ : 12 Jan, 2018

ರೋಹ್ಟಕ್, ಜ.11: ಮಾಜಿ ವಿಶ್ವ ಹಾಗೂ ಏಷ್ಯನ್ ಚಾಂಪಿಯನ ಎಲ್.ಸರಿತಾದೇವಿ(60ಕೆಜಿ) ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸೋನಿಯಾ ಲಾಥರ್(57ಕೆಜಿ) ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ಫೈನಲ್‌ಗೆ ತಲುಪಿದ್ದಾರೆ.

ಗುರುವಾರ ನಡೆದ ಸೆಮಿ ಫೈನಲ್‌ನಲ್ಲಿ ಸರಿತಾದೇವಿ ಹರ್ಯಾಣದ ಮೋನಿಕಾರನ್ನು 5-0 ಅಂತರದಿಂದ ಮಣಿಸಿದರು. ರೈಲ್ವೇಸ್ ಸ್ಪೋರ್ಟ್ಸ್ ಪ್ರೊಮೊಶನ್ ಬೋರ್ಡ್ ನ ಪವಿತ್ರಾರನ್ನು ಫೈನಲ್‌ನಲ್ಲಿ ಎದುರಿಸಲಿದ್ದಾರೆ. ಪವಿತ್ರಾ ಮತ್ತೊಂದು ಸೆಮಿ ಫೈನಲ್‌ನಲ್ಲಿ ಪ್ರಿಯಾಂಕಾ ಚೌಧರಿ ಅವರನ್ನು 5-0 ಅಂತರದಿಂದ ಮಣಿಸಿದ್ದಾರೆ.

ಮತ್ತೊಂದೆಡೆ, ಸೋನಿಯಾ ಅವರು ಅಖಿಲ ಭಾರತ ಪೊಲೀಸ್ ತಂಡದ ಸಂಧ್ಯಾ ರಾಣಿ ಅವರನ್ನು 5-0 ಅಂತರದಿಂದ ಸೋಲಿಸಿದರು. ಪ್ರಶಸ್ತಿ ಸುತ್ತಿನಲ್ಲಿ ಯುತ್ ವಿಶ್ವ ಚಾಂಪಿಯನ್ ಶಶಿ ಚೋಪ್ರಾರನ್ನು ಎದುರಿಸಲಿದ್ದಾರೆ. ಚೋಪ್ರಾ ಸೆಮಿಫೈನಲ್‌ನಲ್ಲಿ ಆಂಧ್ರಪ್ರದೇಶದ ಸೋನಿಯಾರನ್ನು ಮಣಿಸಿದ್ದರು.

ರೈಲ್ವೇಸ್ ಸ್ಪೋರ್ಟ್ಸ್ ಪ್ರೊಮೊಶನ್ ಬೋರ್ಡ್‌ನ ಮೀನಾಕ್ಷಿ ಅವರನ್ನು ಮಣಿಸಿದ ಸರ್ಜುಬಾಲಾ ದೇವಿ(48ಕೆಜಿ) ಫೈನಲ್‌ಗೆ ಪ್ರವೇಶಿಸಿದ್ದಾರೆ.

ಮಾಜಿ ವಿಶ್ವ ಜೂನಿಯರ್ ಚಾಂಪಿಯನ ನಿಖತ್ ಝರೀನ್(48ಕೆಜಿ) ಹೋರಾಟ ಅಂತ್ಯಗೊಂಡಿದೆ. ಅವರು ಹರ್ಯಾಣದ ರಿತು ವಿರುದ್ಧ ಸೋತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)