varthabharthi

ಕ್ರೀಡೆ

ಖ್ಯಾತ ಕುಸ್ತಿಪಟು ಸುಖ್‌ಚೈನ್ ನಿಧನ

ವಾರ್ತಾ ಭಾರತಿ : 12 Jan, 2018
Varthabharathi

ಪಟಿಯಾಲ, ಜ.11: ಖ್ಯಾತ ಕುಸ್ತಿಪಟು ಹಾಗೂ 1974ರ ಟೆಹರಾನ್ ಏಷ್ಯನ್ ಗೇಮ್ಸ್‌ನಲ್ಲಿ ಅವಳಿ ಕಂಚು ಜಯಿಸಿದ್ದ ಸುಖ್‌ಚೈನ್ ಸಿಂಗ್ ಚೀಮಾ ಪಟಿಯಾಲ ಬೈಪಾಸ್‌ನಲ್ಲಿ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

67ರ ಪ್ರಾಯದ ಸಿಂಗ್ ಭನ್ರಿ ಗ್ರಾಮದಲ್ಲಿರುವ ತೋಟದಿಂದ ಮನಗೆ ವಾಪಸಾಗುತ್ತಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್‌ಪುರದಿಂದ ಬರುತ್ತಿದ್ದ ಕಾರೊಂದು ಚೀಮಾರಿದ್ದ ವಾಹನಕ್ಕೆ ಢಿಕ್ಕಿಯಾಗಿದೆ. ಸ್ಥಳೀಯ ಆಸ್ಪತ್ರೆಗೆ ಸೇರಿಸುವ ಮೊದಲು ಸಿಂಗ್ ಕೊನೆಯುಸಿರೆಳೆದಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಚೀಮಾ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪಂಜಾಬ್‌ನ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ನವಜೋತ್ ಸಿಂಗ್ ಸಿಧು ಅವರು ಚೀಮಾರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

 

Comments (Click here to Expand)