varthabharthi

ಸಿನಿಮಾ

"ಬಝಾರ್"ನಲ್ಲಿ ಸೈಫ್

ವಾರ್ತಾ ಭಾರತಿ : 12 Jan, 2018
Varthabharathi

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ನಾಯಕನ ಪಾತ್ರಗಳಲ್ಲೇ ಮಿಂಚಿರುವ ಸೈಫ್ ಅಲಿ ಖಾನ್ ಇದೀಗ ನೆಗೆಟಿವ್ ಶೇಡ್ ಇರುವ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ನಿಖಿಲ್ ಅಡ್ವಾಣಿ ಆ್ಯಕ್ಷನ್ ಕಟ್ ಹೇಳಿರುವ ಬಝಾರ್‌ನಲ್ಲಿ, ಸೈಫ್ ಗುಜರಾತಿ ಉದ್ಯಮಿಯ ಪಾತ್ರದಲ್ಲಿ ನಟಿಸಿದ್ದು, ಅದು ಒಂಥರ ವಿಲನ್ ರೀತಿಯ ಪಾತ್ರವಂತೆ. ಹೊಸಬರಾದ ರೋಹನ್ ಮೆಹ್ರಾ ಈ ಚಿತ್ರದ ನಾಯಕ. ತನ್ನದು ನೆಗೆಟಿವ್ ಪಾತ್ರವದಾರೂ, ಸಾಕಷ್ಟು ಸತ್ವಯುತವಾದುದು. ಹೀಗಾಗಿಯೇ ತಾನು ಆ ಪಾತ್ರವನ್ನು ಒಪ್ಪಿಕೊಂಡಿದ್ದಾಗಿ ಸೈಫ್ ಇತ್ತೀಚೆಗೆ ಆಂಗ್ಲದಿನಪತ್ರಿಕೆಯೊಂದಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದ್ದೂರಿಯಾಗಿಯೇ ನಿರ್ಮಾಣವಾಗಲಿರುವ ಈ ಚಿತ್ರವು ಭಾರತದ ಷೇರು ಮಾರುಕಟ್ಟೆಯ ಏಳುಬೀಳುಗಳ ನಡುವೆ ನಡೆಯುವ ಅಪರಾಧಗಳ ರೋಚಕ ಕತೆಯನ್ನು ಹೊಂದಿದೆ. ನಟನಾದವನು ಯಾವುದೇ ಪಾತ್ರದಲ್ಲೂ ತನ್ನ ಪ್ರತಿಭೆಯನ್ನು ತೋರ್ಪಡಿಸಲು ಸಿದ್ಧನಿರಬೇಕು. ನಾನು ಯಾವ ಪಾತ್ರದಲ್ಲೂ ಭೇದವೆಣಿಸುವುದಿಲ್ಲ. ಯಾವುದೇ ಪ್ರಭಾವಶಾಲಿಯಾದ ಪಾತ್ರವನ್ನೂ ನಿರ್ವಹಿಸಲು ತಾನು ಸಿದ್ಧನೆಂದು ಸೈಫ್ ಹೇಳಿಕೊಂಡಿದ್ದರು.

ನಾಯಕಿಯಾಗಿ ನಟಿಸಿರುವ ರಾಧಿಕಾ ಅಪ್ಟೆಗೂ ಚಿತ್ರದಲ್ಲಿ ಮಹತ್ವದ ಪಾತ್ರವಿದೆಯಂತೆ. ನಾಯಕಿ ಪಾತ್ರದಲ್ಲಿ ಪರಿಣಾಮಕಾರಿಯಾದ ಅಭಿನಯದ ಅಗತ್ಯವಿರುವುದರಿಂದ ಅದಕ್ಕೆ ರಾಧಿಕಾ ಅಪ್ಟೆ ಸೂಕ್ತ ಆಯ್ಕೆಯೆಂದು ತಾನು ಮನಗಂಡಿದ್ದಾಗಿ ನಿಖಿಲ್ ಹೇಳಿದ್ದಾರೆ. ತಾನೋರ್ವ ಅದ್ಭುತ ನಟಿಯೆಂದು ರಾಧಿಕಾ ಈ ಚಿತ್ರದಲ್ಲಿ ಸಾಬೀತುಪಡಿಸಲಿದ್ದಾಳೆ ಎಂದು ನಿಖಿಲ್ ಭರವಸೆ ವ್ಯಕ್ತಪಡಿಸಿದ್ದಾರೆ.

 

Comments (Click here to Expand)