varthabharthi

ಕ್ರೀಡೆ

ಪದ್ಮಾವತ್-ಪ್ಯಾಡ್‌ಮ್ಯಾನ್ ಬಾಕ್ಸ್ಆಫೀಸ್ ಸಮರ

ವಾರ್ತಾ ಭಾರತಿ : 12 Jan, 2018

ಚಿತ್ರೀಕರಣದ ಆರಂಭದ ದಿನಗಳಿಂದಲೇ ವಿವಾದದ ಸುಳಿಗೆ ಸಿಲುಕಿಕೊಂಡಿರುವ ಪದ್ಮಾವತಿಗೆ ಸೆನ್ಸಾರ್ ಮಂಡಳಿಯ ಹಸಿರು ನಿಶಾನೆ ದೊರೆತಿದ್ದು, ಪದ್ಮಾವತ್ ಎಂಬ ಹೆಸರು ಬದಲಾಯಿಸಿಕೊಂಡು ತೆರೆಕಾಣಲಿದೆ.

ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರ ಜನವರಿ 25ರಂದು ಬಿಡುಗಡೆಗೊಳ್ಳುವುದು ಈಗ ಖಚಿತವಾಗಿದೆ.ಆದರೆ ಆ ದಿನದಂದೇ ಅಕ್ಷಯ್ ಅಭಿನಯದ ಪ್ಯಾಡ್‌ಮ್ಯಾನ್ ಬಿಡುಗಡೆಗೊಳ್ಳುವುದು ಈಗ ಖಚಿತವಾಗಿದೆ. ಹೀಗಾಗಿ ಎರಡೂ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಸಮರ ನಡೆಯುವುದು ಗ್ಯಾರಂಟಿಯಾಗಿದೆ.

ಆದಾಗ್ಯೂ ಪದ್ಮಾವತಿ, ಜ.25ರಂದು ಬಿಡು ಗಡೆಗೊಳ್ಳುವ ಬಗ್ಗೆ ತಮಗೆ ಈತನಕ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಿಲ್ಲವೆಂದು ಪ್ಯಾಡ್‌ಮ್ಯಾನ್‌ನ ನಿರ್ಮಾಪಕರು ಹೇಳಿದ್ದಾರೆ. ಒಂದು ವೇಳೆ ಪದ್ಮಾವತಿ ಅಂದು ಬಿಡುಗಡೆ ಗೊಂಡರೂ, ಪ್ಯಾಡ್‌ಮ್ಯಾನ್‌ನ ರಿಲೀಸ್ ಮುಂದೂ ಡಲ್ಪಡುವುದಿಲ್ಲವೆಂದು ನಿರ್ಮಾಪಕರ ಲ್ಲೊಬ್ಬರಾದ ಪ್ರೇರಣಾ ಆರೋರಾ ತಿಳಿಸಿದ್ದಾರೆ. ಪದ್ಮಾವತಿಗೆ ಈಗಾಗಲೇ ಕೇಂದ್ರ ಸೆನ್ಸಾರ್ ಮಂಡಳಿಯು, ಯುಎ ಸರ್ಟಿಫಿಕೇಟ್ ನೀಡಿದೆ. ರಜಪೂತ ಹಾಗೂ ಸಂಘಪರಿವಾರದ ಬೆಂಬಲಿಗರ ವಿರೋಧದ ಹಿನ್ನೆಲೆಯಲ್ಲಿ ಚಿತ್ರದ ಹೆಸರನ್ನೂ ಪದ್ಮಾವತ್ ಎಂದೂ ಬದಲಿಸು ವಂತೆಯೂ ಸೂಚಿಸಿತ್ತು. ಚಿತ್ರದ ಒಂದೆರಡು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಲಾಗಿದೆಯೆಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಸೆನ್ಸಾರ್ ಮಂಡಳಿ ಅದನ್ನು ದೃಢೀಕರಿಸಿಲ್ಲ. ಈ ಮಧ್ಯೆ ರಾಜಸ್ಥಾನದಲ್ಲಿ ಪದ್ಮಾವತ್‌ಗೆ ಅಲ್ಲಿನ ರಾಜ್ಯ ಸರಕಾರ ನಿಷೇಧ ಹೇರಿದೆ. ಅದ್ದೂರಿಯಾಗಿ ನಿರ್ಮಾಣವಾಗಿರುವ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಹೀದ್ ಕಪೂರ್, ರಣವೀರ್ ಸಿಂಗ್ ಮುಖ್ಯಪಾತ್ರಗಳಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)