varthabharthi

ಸಿನಿಮಾ

'ಆಮಿ'ಯ ಫಸ್ಟ್ ಲುಕ್

ವಾರ್ತಾ ಭಾರತಿ : 12 Jan, 2018

ಮಲಯಾಳಂನ ಖ್ಯಾತ ಬರಹಗಾರ್ತಿ ಕಮಲ ಸುರಯ್ಯಾರ ಜೀವನಕಥೆಯನ್ನು ಆಧರಿಸಿದ ಆಮಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಜನಪ್ರಿಯ ನಟಿ ಮಂಜು ವಾರಿಯರ್, ಆಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ವತಃ ಮಂಜುವಾರಿಯರ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಆಮಿಯ ಫಸ್ಟ್‌ಲುಕ್ ಪೋಸ್ಟರ್‌ನ್ನು ಅಭಿಮಾನಿಗಳಿಗಾಗಿ ಪ್ರಕಟಿಸಿದ್ದಾರೆ.

ಮೊದಲಿಗೆ ಚಿತ್ರದಲ್ಲಿ ಆಮಿಯ ಪಾತ್ರಕ್ಕೆ ಬಾಲಿವುಡ್‌ನ ಖ್ಯಾತ ನಟಿ ವಿದ್ಯಾಬಾಲನ್ ಆಯ್ಕೆಯಾಗಿದ್ದರು. ಅದಕ್ಕೆ ಆಕೆ ಕಾಲ್‌ಶೀಟ್ ಕೂಡಾ ನೀಡಿದ್ದರು. ಆದರೆ,ಹಠಾತ್ತನೆ ಆಕೆ ಹಿಂದೆ ಸರಿದಿದ್ದರು. ಆನಂತ ನಿರ್ದೇಶಕ ಕಮಲ್ ಅವರು ಮಂಜುವಾರಿಯರ್‌ರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ವಿಶೇಷವೆಂದರೆ, ಆಮಿ ಚಿತ್ರದ ಎರಡು ಹಾಡುಗಳು ಹಿಂದಿ ಭಾಷೆಯಲ್ಲಿ. ಬಾಲಿವುಡ್‌ನ ಖ್ಯಾತ ಗೀತರಚನಾಕಾರ ಗುಲ್ಜಾರ್ ಈ ಎರಡು ಹಾಡುಗಳನ್ನು ಬರೆದಿದ್ದಾರೆ. ವಿಶ್ವವಿಖ್ಯಾತ ತಬಲ ವಾದಕ ಉಸ್ತಾದ್ ಝಾಕಿರ್ ಹುಸೈನ್ ಅವರ ಸಹೋದರ ತೌಫೀಕ್ ಖುರೈಷಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹೀಗೆ ಹಲವು ವಿಶೇಷತೆಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿರುವ ಆಮಿ, ಮಲಯಾಳಂ ಚಿತ್ರರಂಗದಲ್ಲಿ ವ್ಯಾಪಕವಾದ ಕುತೂಹಲ ಸೃಷ್ಟಿಸಿರುವುದಂತೂ ನಿಜ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)