varthabharthi

ಸಿನಿಮಾ

500 ಕೋಟಿ ರೂ. ಬಾಚಿದ "ಟೈಗರ್"

ವಾರ್ತಾ ಭಾರತಿ : 12 Jan, 2018
Varthabharathi

ಸಲ್ಮಾನ್ ಖಾನ್, ತಾನು ಬಾಕ್ಸ್‌ಆಫೀಸ್ ಸುಲ್ತಾನ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ನಟನೆಯ ಟೈಗರ್ ಜಿಂದಾ ಹೈ ಬಾಕ್ಸ್‌ಆಫೀಸ್‌ನಲ್ಲಿ ಆರ್ಭ ಟಿಸುತ್ತಿದೆ. ಕೇವಲ 15 ದಿನಗಳಲ್ಲಿ ಚಿತ್ರವು 500 ಕೋಟಿ ರೂ. ಕ್ಲಬ್‌ಗೆ ಸೇರ್ಪಡೆಗೊಂಡಿದೆ.

2012ರಲ್ಲಿ ತೆರೆಕಂಡ ಏಕ್ ಥಾ ಟೈಗರ್‌ನ ಮುಂದುವರಿದ ಭಾಗವಾದ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಲ್ಮಾನ್‌ಖಾನ್ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಕ್ ಥಾ ಟೈಗರ್‌ನಲ್ಲಿ ನಟಿಸಿದ್ದ ಕತ್ರಿನಾ ಕೈಫ್ ಈ ಚಿತ್ರದಲ್ಲೂ ಸಲ್ಮಾನ್‌ಗೆ ನಾಯಕಿಯಾಗಿದ್ದಾರೆ. ಒತ್ತೆಸೆರೆಯಲ್ಲಿರುವ ಭಾರತೀಯ ನರ್ಸ್‌ಗಳನ್ನು ಬಿಡುಗಡೆಗೊಳಿಸುವ ಕಥಾವಸ್ತುವಿರುವ ಈ ಚಿತ್ರದಲ್ಲಿ ರೋಮಾಂಚಕಕಾರಿ ಆ್ಯಕ್ಷನ್ ದೃಶ್ಯಗಳಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಮತ್ತೆ ಮತ್ತೆ ಸೆಳೆಯುವಂತೆ ಮಾಡಿದೆ.

ಕಳೆದ ವರ್ಷ ಸಲ್ಮಾನ್ ಅಭಿನಯದ ಟ್ಯೂಬ್‌ಲೈಟ್, ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಇದೀಗ ಟೈಗರ್ ಜಿಂದಾ ಹೈ, ಸಲ್ಮಾನ್‌ಗೆ ಆ ಕೊರತೆಯನ್ನು ನೀಗಿಸಿದೆ. ಬಾಹುಬಲಿ-2 , ದಂಗಲ್,ಪಿಕೆ, ಬಜರಂಗಿ ಭಾಯ್‌ಜಾನ್, ಸುಲ್ತಾನ್ ಹಾಗೂ ಧೂಮ್ 3 ಬಳಿಕ ಟೈಗರ್ ಜಿಂದಾ ಹೈ, 500 ಕೋಟಿ ರೂ. ಕ್ಲಬ್‌ಗೆ ಸೇರಿದ ಏಳನೇ ಭಾರತೀಯ ಚಿತ್ರವಾಗಿದೆ.

 

Comments (Click here to Expand)