varthabharthi

ರಾಷ್ಟ್ರೀಯ

ನಿತೀಶ್ ಬೆಂಗಾವಲು ಪಡೆಯ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ

ವಾರ್ತಾ ಭಾರತಿ : 12 Jan, 2018
Varthabharathi

ಪಾಟ್ನಾ,ಜ.12 : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ಪಡೆಯ ವಾಹನಗಳ  ಮೇಲೆ ಬುಕ್ಸಾರ್ ನ  ನಂದರ್ ಎಂಬಲ್ಲಿ  ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಮುಖ್ಯಮಂತ್ರಿಗೆ ಈ ಘಟನೆಯಿಂದ ಏನೂ ತೊಂದರೆಯಾಗದೇ ಇದ್ದರೂ ಕೆಲವು ಭದ್ರತಾ ಸಿಬ್ಬಂದಿಗಳಿಗೆ ಗಾಯಗಳುಂಟಾಗಿವೆ ಎಂದು ತಿಳಿದು ಬಂದಿದೆ. ತಮ್ಮ ವಿಕಾಸ್ ಸಮೀಕ್ಷಾ ಯಾತ್ರಾ ಅಂಗವಾಗಿ ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದಾಗ ಈ ದಾಳಿ ನಡೆದಿದೆ.

ನಂದನ್ ಗ್ರಾಮದ ದಲಿತರ ಬಸ್ತಿಗೆ ಮುಖ್ಯಮಂತ್ರಿ ಭೇಟಿ ನೀಡಬೇಕೆಂದು ಅಲ್ಲಿನ ಗ್ರಾಮಸ್ಥರು ಪಟ್ಟು ಹಿಡಿದಿದ್ದರೂ ನಿತೀಶ್ ಅಲ್ಲಿಗೆ ಭೇಟಿ ನೀಡದೇ ಇದ್ದ ಕಾರಣ ಉದ್ರಿಕ್ತ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆಂದು ಹೇಳಲಾಗಿದೆ.

ರಾಜ್ಯ ಸರಕಾರ ಜಾರಿಗೊಳಿಸಿರುವ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿವೆಯೇ ಎಂದು ತಿಳಿದುಕೊಳ್ಳಲು ಮುಖ್ಯಮಂತ್ರಿ ಡಿಸೆಂಬರ್ 12ರಿಂದ ರಾಜ್ಯ ಪ್ರವಾಸದಲ್ಲಿದ್ದಾರೆ.

 

Comments (Click here to Expand)