varthabharthi

ಕರ್ನಾಟಕ

ನವಜಾತ ಶಿಶು ಸಂರಕ್ಷಣ ಘಟಕದಿಂದ ಮಗುವಿನ ಸಂರಕ್ಷಣೆ

ಗಂಗಾವತಿ,: ನವಜಾತ ಶಿಶು ಪತ್ತೆ

ವಾರ್ತಾ ಭಾರತಿ : 12 Jan, 2018

ಗಂಗಾವತಿ,ಜ.12: ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಶೌಚಾಲಯದ ಹತ್ತಿರದ ತಿಪ್ಪೆಗುಂಡಿಯಲ್ಲಿ ನವಜಾತ ಗಂಡು ಶಿಶುವೊಂದು ಶುಕ್ರವಾರ ಪತ್ತೆಯಾಗಿದೆ. 

ಬೆಳ್ಳಿಗ್ಗೆ ಕಲ್ಗುಡಿ ಗ್ರಾಮದ ಭೀಮಮ್ಮ ಬಹಿರ್ದೆಸೆಗಾಗಿ ತೆರಳಿದ ಸಂದರ್ಭದಲ್ಲಿ ಮಗು ಅಳುವ ಶಬ್ದ ಕೇಳಿ ಅಲ್ಲಿಗೆ ಧಾವಿಸಿದ್ದಾರೆ. ನಂತರ ಗ್ರಾಮೀಣ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸರಕಾರಿ ಆಸ್ಪತ್ರೆ ಯ ನವಜಾತ ಶಿಶು ಸಂರಕ್ಷಣ ಘಟಕ ಡಾ. ಅನೀಲ್ ರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದು ಮಗುವನ್ನು ರಕ್ಷಣೆ ಮಾಡಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ ಕೊಪ್ಪಳದ ಮಕ್ಕಳ ಸಂರಕ್ಷಣಾ ಕೇಂದ್ರಕ್ಕೆ ಮಗುವನ್ನು ತಲುಪಿಸಲಾಗಿದೆ. 
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)