varthabharthi

ರಾಷ್ಟ್ರೀಯ

ಓದಿನತ್ತ ಗಮನ ನೀಡಲು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕ

ವಾರ್ತಾ ಭಾರತಿ : 12 Jan, 2018

ಭೋಪಾಲ್, ಜ.12: ಕಲಿಕೆಗೆ ಗಮನ ನೀಡದೆ ಆಟದಲ್ಲೇ ಸಕ್ರಿಯನಾಗಿರುವ ಬಗ್ಗೆ ಪೋಷಕರು ಗದರಿದ ಕಾರಣ ಮಧ್ಯಪ್ರದೇಶದ 4ನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.

  ಭೋಪಾಲ್‌ನಿಂದ 43 ಕಿ.ಮೀ. ದೂರದ ಬೆರಾಸಿಯಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುವಾರ ಸುಮಾರು 6 ಗಂಟೆಗೆ ಎದ್ದ ಬಾಲಕ ತನ್ನ ಗೆಳೆಯನೊಂದಿಗೆ ಆಟವಾಡತೊಡಗಿದ್ದಾನೆ. ಶಾಲೆ 9 ಗಂಟೆಗೆ ಆರಂಭವಾಗುವ ಕಾರಣ ಆಟ ನಿಲ್ಲಿಸಿ ಶಾಲೆಗೆ ಹೋಗುವಂತೆ ತಾಯಿ ಗದರಿದ್ದಾಳೆ. ಅಲ್ಲದೆ ಓದಿನ ಕಡೆ ಹೆಚ್ಚಿನ ಗಮನ ನೀಡುವಂತೆ ತಿಳಿಸಿದ್ದಾಳೆ ಎನ್ನಲಾಗಿದೆ. ಇದಾದ ಕೆಲ ಕ್ಷಣಗಳಲ್ಲೇ ಕಟ್ಟಿಗೆ ದಾಸ್ತಾನು ಮಾಡುವ ಕೋಣೆಗೆ ಹೋದ ಬಾಲಕ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಬಾಲಕನ ಅತ್ತೆ ಕಟ್ಟಿಗೆ ತರಲೆಂದು ಕೋಣೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದ್ದು ತಕ್ಷಣ ಆಕೆ ಮನೆಯವರಿಗೆ ತಿಳಿಸಿದ್ದಾಳೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)