varthabharthi

ಕರಾವಳಿ

ಡಿವ್ಯೆಎಫ್‌ಐ ಮಾದಕ ವ್ಯಸನದ ವಿರುದ್ಧ ಜನಜಾಗೃತಿ

ವಾರ್ತಾ ಭಾರತಿ : 12 Jan, 2018
Varthabharathi

ಮಂಗಳೂರು, ಜ. 12: ಡಿ.ವೈ.ಎಫ್.ಐ. ಕಾಟಿಪಳ್ಳ ಘಟಕದ ವತಿಯಿಂದ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯಕ್ರಮವು ಇತ್ತೀಚೆಗೆ ಕಾಟಿಪಳ್ಳ ಜಂಕ್ಷನ್ ಬಳಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿವ್ಯೆಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಗಾಂಜಾ, ಅಫೀಮ್‌ನಂತಹಾ ಮಾದಕ ವಸ್ತುಗಳು ಇತ್ತೀಚಿನ ದಿನಗಳಲ್ಲಿ ಯುವಕರನ್ನು ಸಾಂಕ್ರಾಮಿಕ ರೋಗದಂತೆ ಆವರಿಸಿಕೊಂಡಿದೆ. ಇದಕ್ಕೆ ಬಲಿಬಿದ್ದ ಯುವಕರಿಂದಾಗಿ ಇಲ್ಲಿ ಅಪರಾಧಗಳು ಅಧಿಕವಾಗುತ್ತಿದೆ ಎಂದರು.

 

Comments (Click here to Expand)