ಅಲ್ ಮುನವ್ವರ ಇಂಟರ್ ನ್ಯಾಷನಲ್ ಹಜ್ ಉಮ್ರಾ: ಎರಡು ಶಾಖೆಗಳ ಉದ್ಘಾಟನೆ
ಮಂಗಳೂರು, ಜ. 12: ಅಲ್ ಮುನವ್ವರ ಇಂಟರ್ ನ್ಯಾಷನಲ್ ಹಜ್ ಉಮ್ರಾ ಝಿಯಾರತ್ ಮಂಗಳೂರು ಇದರ 4ನೆ ಶಾಖೆಯು ಮೂಡಬಿದ್ರೆಯ ಕೇಂದ್ರ ಜುಮಾ ಮಸೀದಿ ಬಳಿಯ ಗೋಲ್ಡನ್ ಪಾಯಿಂಟ್ ಕಟ್ಟಡದ 1ನೆ ಮಹಡಿಯಲ್ಲಿ ಉದ್ಘಾಟನೆಗೊಂಡಿತು.
ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ದುವಾ ನೆರವೇರಿಸುವ ಮೂಲಕ ಶಾಖೆಯನ್ನು ಉದ್ಘಾಟಿಸಿದರು. ಸಂಸ್ಥೆಯ 3ನೆ ಶಾಖೆಯು ಬೆಳ್ತಂಗಡಿಯ ಜಂಇಯ್ಯತುಲ್ ಫಲಾಹ್ ಕಟ್ಟಡದ ಒಂದನೆ ಮಹಡಿಯಲ್ಲಿ ಉದ್ಘಾಟನೆಗೊಂಡಿತು.
ಅಸ್ಸಯ್ಯಿದ್ ಕಾಜೂರು ತಂಙಲ್ ಉದ್ಘಾಟಿಸಿದರು. ಹನೀಫ್ ದಾರಿಮಿ ದುವಾ ನೆರವೇರಿಸಿದರು. ಸಂಸ್ಥೆಯ ನಿರ್ದೇಶಕ ಹಾಜಿ ಎಚ್.ಎಂ. ಝಾಕಿರ್ ಹುಸೈನ್ ಮತ್ತು ಜೋಕಟ್ಟೆ ಹಳೆ ಜುಮಾ ಮಸೀದಿಯ ಖತೀಬ್ ಇಸ್ಹಾಕ್ ಫೈಝಿ ಕುಕ್ಕಿಲ ಮತ್ತು ಬೆಳ್ತಂಗಡಿ ಶಾಖೆಯ ಉಸ್ತುವಾರಿ ಬಶೀರ್ ಉಪಸ್ಥಿತರಿದ್ದರು.
Next Story