varthabharthi

ಕ್ರೀಡೆ

ಆಸ್ಟ್ರೇಲಿಯನ್ ಓಪನ್‌

ಯೂಕಿ ಭಾಂಬ್ರಿಗೆ ಸತತ ಎರಡನೇ ಗೆಲುವು

ವಾರ್ತಾ ಭಾರತಿ : 13 Jan, 2018
Varthabharathi

ಮೆಲ್ಬೋರ್ನ್, ಜ.12: ಭಾರತದ ಅಗ್ರಮಾನ್ಯ ಆಟಗಾರ ಯೂಕಿ ಭಾಂಬ್ರಿ ಸ್ಪೇನ್‌ನ ಕಾರ್ಲೊಸ್ ಟ್ಯಾಬೆರ್ನರ್‌ರನ್ನು ಮಣಿಸಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಹಾಗೂ ಅಂತಿಮ ಅರ್ಹತಾ ಸುತ್ತಿಗೆ ಪ್ರವೇಶಿಸಿದ್ದಾರೆ.

ಶುಕ್ರವಾರ 54 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ವಿಶ್ವದ ನಂ.122ನೇ ಆಟಗಾರ ಭಾಂಬ್ರಿ 183ನೇ ರ್ಯಾಂಕಿನ ಕಾರ್ಲೊಸ್‌ರನ್ನು 6-0, 6-2 ಅಂತರದಿಂದ ಸೋಲಿಸಿದರು. ಸತತ ಎರಡನೇ ಗೆಲುವು ಸಾಧಿಸಿರುವ ಭಾಂಬ್ರಿ ಟೂರ್ನಿಯ ಪ್ರಧಾನ ಸುತ್ತಿಗೇರುವತ್ತ ಹೆಜ್ಜೆ ಇಟ್ಟಿದ್ದಾರೆ. ಮೂರನೇ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕೆನಡಾದ ಪೀಟರ್ ಪೊಲಾಂಕ್‌ಸಿ ಅವರನ್ನು ಎದುರಿಸಲಿದ್ದಾರೆ.

ಒಂದು ವೇಳೆ ಭಾಂಬ್ರಿ ಮೂರನೇ ಸುತ್ತಿನ ಅರ್ಹತಾ ಪಂದ್ಯವನ್ನು ಗೆದ್ದುಕೊಂಡರೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಬಾರಿ ಪ್ರಧಾನ ಸುತ್ತಿಗೆ ಪ್ರವೇಶಿಸಲಿದ್ದಾರೆ.

ಭಾಂಬ್ರಿ 2015ರಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಆ್ಯಂಡಿ ಮರ್ರೆಗೆ ಸೋತಿದ್ದರು. 2016ರಲ್ಲಿ ಥಾಮಸ್ ಬೆರ್ಡಿಕ್ ವಿರುದ್ಧ ಸೋತು ಮೊದಲ ಸುತ್ತಿನಲ್ಲೇ ಎಡವಿದ್ದರು.

 

Comments (Click here to Expand)