varthabharthi

ಕ್ರೀಡೆ

ಅಂಧರ ಕ್ರಿಕೆಟ್ ವಿಶ್ವಕಪ್‌: ಪಾಕ್ ವಿರುದ್ಧ ಭಾರತಕ್ಕೆ ಜಯ

ವಾರ್ತಾ ಭಾರತಿ : 13 Jan, 2018

ದುಬೈ, ಜ.12: ಅಂಧರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ.

ಶುಕ್ರವಾರ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಾಕ್ ನಿಗದಿತ 40 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 282 ರನ್ ಗಳಿಸಿತು.

ಪಾಕ್ ಪರ ಮುಹಮ್ಮದ್ ಜಮೀಲ್(ಔಟಾಗದೆ 94) ಹಾಗೂ ನಾಯಕ ನಾಸಿರ್ ಅಲಿ(63) 3ನೇ ವಿಕೆಟ್‌ಗೆ 137 ರನ್ ಜೊತೆಯಾಟ ನಡೆಸಿದರು. ಇದಕ್ಕೆ ಉತ್ತರವಾಗಿ ಭಾರತ 34.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಹರ್ಯಾಣದ ದೀಪಕ್ ಮಲಿಕ್ ಅಜೇಯ 79 ರನ್(71 ಎಸೆತ, 8 ಬೌಂಡರಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು. ವೆಂಕಟೇಶ್(64, 55 ಎಸೆತ) ಹಾಗೂ ನಾಯಕ ಅಜಯ್ ರೆಡ್ಡಿ(47, 34 ಎಸೆತ) 4ನೇ ವಿಕೆಟ್‌ಗೆ 106 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.

 

Comments (Click here to Expand)