varthabharthi

ಕರ್ನಾಟಕ

ಹಾಸನದಲ್ಲಿ ಭೀಕರ ಅಪಘಾತ: ಮೆಡಿಕಲ್ ವಿದ್ಯಾರ್ಥಿನಿ ಸೇರಿ 8 ಮಂದಿ ಮೃತ್ಯು

ವಾರ್ತಾ ಭಾರತಿ : 13 Jan, 2018

ಹಾಸನ, ಜ. 13: ಹಾಸನ ತಾಲ್ಲೂಕು ಕಾರೆಕೆರೆ ಶಾಂತಿಗ್ರಾಮದ ಬಳಿ ನಡೆದ ಭೀಕರ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಚಾಲಕ, ಮೆಡಿಕಲ್ ವಿದ್ಯಾರ್ಥಿನಿ ಸೇರಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಐರಾವತ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದೆ.

ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಾಗುತ್ತಿದ್ದ ಬಸ್ ಬೆಳಗಿನ ಜಾವ ಸುಮಾರು 3:30 ಕ್ಕೆ ಅಪಘಾತಕ್ಕೀಡಾಗಿದೆ. ಈ ಸಂದರ್ಭ ಪ್ರಯಾಣಿಕರು ಸವಿ ನಿದ್ದೆಯಲ್ಲಿದ್ದರು. ಅಪಘಾತದ ಬಳಿಕ ಸ್ಥಳೀಯರು, ಆಂಬುಲೆನ್ಸ್ ಸಿಬ್ಬಂದಿ, ಪೊಲೀಸರು ನೆರವಿಗೆ ಧಾವಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

 

Comments (Click here to Expand)