varthabharthi

ರಾಷ್ಟ್ರೀಯ

ಟ್ರಾಕ್ಟರ್ –ಕಾರು ಢಿಕ್ಕಿ; ಐದು ಕುಸ್ತಿಪಟುಗಳು ಸೇರಿದಂತೆ 6 ಮಂದಿ ಬಲಿ

ವಾರ್ತಾ ಭಾರತಿ : 13 Jan, 2018

ಮುಂಬೈ, ಜ.13: ಕಾರು ಮತ್ತು ಟ್ರಾಕ್ಟರ್ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮವಾಗಿ ಕಾರ್ ನಲ್ಲಿದ್ದ ಐವರು ಕುಸ್ತಿಪಟುಗಳು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಪಶ್ಚಿಮ ಮಹಾರಾಷ್ಟ್ರದ ಸಾಂಗಿ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ  ಸಂಭವಿಸಿದೆ.

ಕಡೆಗಾಂವ್-ಸಾಂಗ್ಲಿ ರಸ್ತೆಯಲ್ಲಿ ಐವರು ಕುಸ್ತಿಪಟುಗಳು ಸ್ಥಳೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದಾಗ ಅವರ ಕಾರ್ ಗೆ ಟ್ರಾಕ್ಟರ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮವಾಗಿ ಕಾರ್ ನಲ್ಲಿದ್ದ  ಐವರು ಕುಸ್ತಿಪಟುಗಳು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು.  ಒಟ್ಟು ಏಳು ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸಾಂಗ್ಲಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

 

Comments (Click here to Expand)