varthabharthi

ಕ್ರೀಡೆ

ದ್ವಿತೀಯ ಟೆಸ್ಟ್ : ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ಬ್ಯಾಟಿಂಗ್ ಆಯ್ಕೆ

ವಾರ್ತಾ ಭಾರತಿ : 13 Jan, 2018

ಸೆಂಚೂರಿಯನ್, ಜ.13: ಇಲ್ಲಿ ಆರಂಭಗೊಂಡ ದ್ವಿತೀಯ ಕ್ರಿಕೆಟ್ ಟೆಸ್ಟ್ ನಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ಬ್ಯಾಟಿಂಗ್ ಆಯ್ದುಕೊಂಡಿದೆ.

ಟೀಮ್ ಇಂಡಿಯಾ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ದಕ್ಷಿಣ  ಆಫ್ರಿಕ 72 ರನ್ ಗಳ ಜಯ ಗಳಿಸಿ ಮೂರು ಟೆಸ್ಟ್ ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಗೆಲ್ಲಲೇ ಬೇಕಾದ ಈ ಟೆಸ್ಟ್ ನಲ್ಲಿ ಮೂರು  ಬದಲಾವಣೆ ಮಾಡಲಾಗಿದ್ದು, ಅಜಿಂಕ್ಯ ರಹಾನೆ ಸ್ಥಾನಕ್ಕೆ ಲೋಕೇಶ್ ರಾಹುಲ್ , ವಿಕೆಟ್ ಕೀಪರ್ ವೃದ್ದಿಮಾನ್ ಸಹಾ ಬದಲಿಗೆ ಪಾರ್ಥಿವ್ ಪಟೇಲ್ ಮತ್ತು ವೇಗಿ ಭುವನೇಶ್ವರ್ ಕುಮಾರ್ ಜಾಗಕ್ಕೆ  ಇಶಾಂತ್ ಶರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ.

ಭಾರತದ ಅಂತಿಮ ಹನ್ನೊಂದರ ತಂಡದ ವಿವರ ಇಂತಿವೆ. ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಲೋಕೇಶ್ ರಾಹುಲ್ , ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ, ಪಾರ್ಥಿವ್ ಪಟೇಲ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಮುಹಮ್ಮದ್ ಶಮಿ, ಜಸ್ ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)