varthabharthi

ರಾಷ್ಟ್ರೀಯ

ಹೆಲಿಕಾಪ್ಟರ್ ಪತನ ; ಮೂರು ಮಂದಿ ಸಾವು, ನಾಲ್ವರು ನಾಪತ್ತೆ

ವಾರ್ತಾ ಭಾರತಿ : 13 Jan, 2018

ಮುಂಬೈ, ಜ.13: ಪವನ್ ಹ್ಯಾನ್ಸ್ ಹೆಲಿಕಾಪ್ಟರ್  ಮುಂಬೈನ ಸಮದ್ರದಲ್ಲಿ ಶನಿವಾರ ಪತನಗೊಂಡ ಪರಿಣಾಮವಾಗಿ ಹೆಲಿಕಾಪ್ಟರ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದಾರೆ.

ಹೆಲಿಕಾಪ್ಟರ್ ನಲ್ಲಿ  ಇಬ್ಬರು ಪೈಲೆಟ್ ಗಳು ಮತ್ತು  ಒಎನ್ ಜಿಸಿಯ  ಐವರು ನೌಕರರು  ಸೇರಿದಂತೆ 7 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಒಎನ್ ಜಿಸಿಯ ನೌಕರರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಬೆಳಗ್ಗೆ 10:20ಕ್ಕೆ ಜುಹು ವಿಮಾನ ನಿಲ್ದಾಣದಿಂದ ಹೊರಟಿತ್ತು.  10:58ಕ್ಕೆ ಇಳಿಯಬೇಕಾಗಿದ್ದ ಹೆಲಿಕಾಪ್ಟರ್  ದಹಾನು ಬಳಿಯ  ಸಮುದ್ರದಲ್ಲಿ ಪತನಗೊಂಡಿದೆ. ನಾಪತ್ತೆಯಾಗಿರುವ ಮಂದಿಗೆ ಶೋಧ ಕಾರ್ಯ ಮುಂದುವರಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)