varthabharthi

ಬೆಂಗಳೂರು

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ

ಕ್ರೀಯಾಶೀಲ, ಸಾಧಕ, ಪ್ರತಿಭಾನ್ವಿತರಿಗೆ ವಾರ್ಷಿಕ ಪ್ರಶಸ್ತಿ ಪ್ರಕಟ

ವಾರ್ತಾ ಭಾರತಿ : 13 Jan, 2018

ಬೆಂಗಳೂರು, ಜ. 13: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ವೃತ್ತಿನಿರತ ಪತ್ರಕರ್ತರ ಸಂಘಟನಾತ್ಮಕ ಸಂಸ್ಥೆಯಾಗಿದೆ. ವೃತ್ತಿನಿರತ ಪತ್ರಕರ್ತರ ಪ್ರತಿಭೆ, ಶ್ರಮ ಮತ್ತು ಬದ್ಧತೆಯನ್ನು ಗುರುತಿಸಿ, ಉತ್ತೇಜಿಸುವ ಮತ್ತು ಆ ಮೂಲಕ ಗುಣಾತ್ಮಕ  ಬೆಳವಣಿಗೆಗೆ  ಒತ್ತು ನೀಡುವಲ್ಲಿ ಸಂಘವು ಪ್ರತಿವರ್ಷ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕೊಡ ಮಾಡುತ್ತಿದೆ.

2017-18ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಶ್ರೀ ಡಿ.ವಿ. ಗುಂಡಪ್ಪ ಪ್ರಶಸ್ತಿಯನ್ನು ಈ ಭಾನುವಾರ ಪತ್ರಿಕೆಯ ಸಂಪಾದಕ ಮಹಾದೇವ ಪ್ರಕಾಶ್, ಶ್ರೀ ಗರುಡನ ಗಿರಿ ನಾಗರಾಜ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್, ಶ್ರೀ ಎಸ್.ವಿ ಜಯಶೀಲರಾವ್ ಪ್ರಶಸ್ತಿಯನ್ನು ಬಳ್ಳಾರಿಯ ಪತ್ರಕರ್ತ ವೀರಭದ್ರಪ್ಪಗೌಡರಿಗೆ, ಶ್ರೀ ಡಾ. ಎಂ.ಎಂ ಕಲ್ಬುರ್ಗಿ ಪ್ರಶಸ್ತಿಯನ್ನು ಬೆಳಗಾವಿಯ ಹಿರಿಯ ಪತ್ರಕರ್ತ ಡಾ. ಸರೂಜ್ ಕಾಟ್ಕರ್, ಶ್ರೀ ಪಾಟೀಲ್ ಪುಟ್ಟಪ್ಪ (ಪಾಪು) ಪ್ರಶಸ್ತಿಯನ್ನು ಸುದ್ದಿಮೂಲ ರಾಯಚೂರು ಸಂಪಾದಕ ಬಸವರಾಜ ಸ್ವಾಮಿ, ಶ್ರೀ ಎಂ. ನಾಗೇಂದ್ರ ರಾವ್ ಪ್ರಶಸ್ತಿಯನ್ನು ಕನ್ನಡ ಪ್ರಭ ಬೆಂಗಳೂರು ಇದರ ದೇಶಾದ್ರಿ ಶಿವಮೊಗ್ಗ, ಶ್ರೀ ಹೆಚ್.ಎಸ್ ರಂಗಸ್ವಾಮಿ ಪ್ರಶಸ್ತಿಯನ್ನು ಬೆಂಗಳೂರು ಪತ್ರಕರ್ತ ಆರ್.ಟಿ. ವಿಠಲಮೂರ್ತಿ, ಶ್ರೀ ಮಿಂಚು ಶ್ರೀನಿವಾಸ್ ಪ್ರಶಸ್ತಿಯನ್ನು ಪ್ರಜಾವಾಣಿಯ ಹಿರಿಯ ಪತ್ರಕರ್ತ ವೈ.ಗ. ಜಗದೀಶ್ ಆಯ್ಕೆಯಾಗಿದ್ದಾರೆ.

ಲೇಖನ, ವರದಿ ಬರಹಗಳ ಆಧರಿಸಿ ಕೊಡುವ ವಿಶೇಷ ಪ್ರಶಸ್ತಿಗಳು

ಶ್ರೀಮತಿ ಯಶೋದಮ್ಮ ಜಿ. ನಾರಾಯಣ  ಪ್ರಶಸ್ತಿ ( ಗ್ರಾಮಾಂತರ ಭಾಗದಲ್ಲಿ 20 ವರ್ಷ ಸೇವೆ ಸಲ್ಲಿಸಿರುವ ಹಿರಿಯ ಮಹಿಳಾ ಪತ್ರಕರ್ತರಿಗೆ) ಎಂ. ಎಚ್ ನೀಳಾ, ಬದರಿನಾಥ ಹೊಂಬಾಳೆ ಪ್ರಶಸ್ತಿ (ರಾಜ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿನ ಪತ್ರಕರ್ತರೊಬ್ಬರಿಗೆ) ಇಂಡಿಯನ್ ಎಕ್ಸ್ ಪ್ರೆಸ್ ನ ಜಿ.ಆರ್. ಉದಯಕುಮಾರ್ ಹಾಸನ, ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ (ಪತ್ರಿಕೋದ್ಯಮದಲ್ಲಿ ಮತ್ತು ಪತ್ರಿಕಾ ಸಂಘಟನೆಗಳಲ್ಲಿ ದೀರ್ಘ ಸೇವೆ ಸಲ್ಲಿಸಿದವರಿಗೆ )  ಬೆಂಗಳೂರಿನ ಹಿರಿಯ ಪತ್ರಕರ್ತ ಡಾ. ಕೆ ಉಮೇಶ್ವರ್, ಡಿವಿಜಿ ಪ್ರಶಸ್ತಿ ( ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದರವರಿಗೆ) ಪ್ರಜೋದಯ ಹಾಸನ ಇದರ ಸಂಪಾದಕ ಜೆ.ಆರ್ ಕೆಂಚೇಗೌಡ, ಕಿಡಿಶೇಷಪ್ಪ ಪ್ರಶಸ್ತಿ ( ಸಣ್ಣಮತ್ತು ಮಧ್ಯಮ ಪತ್ರಿಕೆಯ ಸಂಪಾದಕರೊಬ್ಬರಿಗೆ) ನುಡಿಭಾರತಿ ಮಂಡ್ಯ ಸಂಪಾದಕ ಬಸವೇಗೌಡ,  ಆರ್.ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ ನೀಡುವ ಪ್ರಶಸ್ತಿ) ಸುವರ್ಣಟೈಮ್ಸ್ ಆಫ್ ಕರ್ನಾಟಕ, ಬೆಂಗಳೂರು, ಜಿ.ನಾರಾಯಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ) ಶಕ್ತಿ ದಿನಪತ್ರಿಕೆ  ಕೊಡಗು ಇದರ ವರದಿಗಾರ ಕಾಯಪಂಡ ಶಶಿಸೋಮಯ್ಯ, ಪಟೇಲ್ ಭೈರಹನುಮಯ್ಯ ಪ್ರಶಸ್ತಿ ( ಅತ್ಯುತ್ತಮ ಮಾನವೀಯ ವರದಿಗೆ) ಎನ್.ಡಿ ಟಿವಿ ಬೆಂಗಳೂರು ವರದಿಗಾರ ಮಯಾಶರ್ಮ, ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿಗೆ) ವಿಜಯಕರ್ನಾಟಕ ಬೆಂಗಳೂರು ಇದರ ಕೆ. ಗಿರೀಶ್, ಬಿ.ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ) ಹೊಸದಿಗಂತ ಬೆಂಗಳೂರು ವರದಿಗಾರ ಧ್ಯಾನ್ ಪೊಣಚ್ಚ, ಎ.ಎಲ್., ನಾಗೇಶ್ ವಿಜಯ ಕರ್ನಾಟಕ ಚನ್ನರಾಯಪಟ್ಟಣ, ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ವಿಮರ್ಶಾತ್ಮಕ ಲೇಖನಕ್ಕೆ) ಕೆಂಚೇಗೌಡ ವಿಜಯ ಕರ್ನಾಟಕ, ರವಿಪ್ರಕಾಶ್ ಪ್ರಜಾವಾಣಿ. ಕೆ.ಎ ನೆಟ್ಟಕಲ್ಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾವರದಿಗೆ) ವಿಜಯವಾಣಿ ವರದಿಗಾರ ಡಿ.ಪಿ ರಘುನಾಥ್, ಬಿ.ಆರ್., ಸಂಜೆವಾಣಿ ಬೆಂಗಳೂರು ಇದರ ವಿಶ್ವನಾಥ್, ಮಂಗಳ ಎಂ.ಸಿ ವರ್ಗಿಸ್ ಪ್ರಶಸ್ತಿ (ವಾರಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ ಚಿತ್ರ ಲೇಖನಕ್ಕೆ ) ಶಾಂತಲಾ ಧರ್ಮರಾಜ್ ಸಂಪಾದಕರು ಕಸ್ತೂರಿ, ಹಿರಿಯ ಪತ್ರಕರ್ತರ ಬೆನಕನಹಳ್ಳಿ ಶೇಖರಗೌಡ, ಆರ್.ಎಲ್ ವಾಸುದೇವರಾವ್ ಪ್ರಶಸ್ತಿ ( ವನ್ಯಜೀವಿಗಳ ಕುರಿತ ಅತ್ಯುತ್ತಮವರದಿಗೆ)  ದಿ ಹಿಂದೂ ಪತ್ರಿಕೆಯ ವರದಿಗಾರರು ರಶ್ಮಿಭಟ್, ಮಂಡಿಬೆಲೆ ರಾಜಣ್ಣ ಪ್ರಶಸ್ತಿ(ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ ): ಎಂ.ಎಸ್ ಬಸವಣ್ಣ ಮೈಸೂರು , ಚಂದ್ರಮೋಹನ್ ಕುಶಾಲನಗರ, ಆರ್. ಎಲ್ .ವಾಸುದೇವರಾವ್ ಪ್ರಶಸ್ತಿ ( ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ ): ವಿಜಯಕರ್ನಾಟಕ ಮೈಸೂರು ವರದಿಗಾರ ಶಿವಮೂರ್ತಿ ಜಪ್ತಿಮಠ, ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ ( ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತ ವರದಿ): ಹೇಮಾವೆಂಕಟ್ ಪ್ರಜಾವಾಣಿ, ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ ( ಗ್ರಾಮೀಣ ಜನಜೀವನ ಕುರಿತ ಅತ್ಯುತ್ತಮ ವರದಿ): ಪ್ರಜಾವಾಣಿಯ ಬಸವರಾಜ್ ಹವಲ್ದಾರ್ , ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ಜಿಲ್ಲೆ ಅಭಿವೃದ್ದಿ ಕುರಿತು): ವಿಜಯವಾಣಿಯ ಗಿರೀಶ್ ಗರಗ, ನಾಗರತ್ನ, ವಿಶ್ವವಾಣಿ, ಯಜಮಾನ್ ಟಿ ನಾರಾಯಣಪ್ಪ ಸ್ಮಾರಕ ಪ್ರಶಸ್ತಿ(ಅತ್ಯುತ್ತಮ ಕೃಷಿವರದಿ): ಸಂಯುಕ್ತಕರ್ನಾಟಕ ಬೆಳಗಾವಿಯ  ಕೀರ್ತನಾ, ಕೀರ್ತಿ ಪ್ರಸಾದ್ ಉದಯವಾಣಿ, ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ ( ಅತ್ಯುತ್ತಮ ಲೇಖನಕ್ಕೆ): ಸುವರ್ಣಟೈಮ್ಸ್ ಆಫ್ ಕರ್ನಾಟಕ ಇದರ ಝಕ್ರೀಯಾ, ಹಿರಿಯ ಪತ್ರಕರ್ತ ಸಿ.ಎಸ್. ಬೋಪಯ್ಯ, ಅಪ್ಪಾಜಿ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಚಲನ ಚಿತ್ರ ವರದಿಗೆ); ವಿಜಯ ಕರ್ನಾಟಕ ಬೆಂಗಳೂರು ಶ್ರೀಶರಣು ಹೊನ್ನೂರು ಆಯ್ಕೆಯಾಗಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 33ನೇ  ರಾಜ್ಯ ಪತ್ರಕರ್ತರ ಸಮ್ಮೇಳನವು ಜ.20 ಮತ್ತು 21 ರಂದು ಹಾಸನ ಜಿಲ್ಲೆಯ ಶ್ರವಣ ಬೆಳಗೊಳದಲ್ಲಿ ನಡೆಯಲಿದ್ದು,  ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು  ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎನ್.ರಾಜು ಪ್ರಕಟನೆಯಲ್ಲಿ ತಿಳಿಸಿದ್ದಾರೆ ತಿಳಿಸಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)