varthabharthi

ಕರಾವಳಿ

ಬೋಳಂಗಡಿ: 'ಉಮ್ಮುಲ್ ಕುರಾ ತಹ್‌ಫೀಝುಲ್ ಕುರ್ ಆನ್' ಉದ್ಘಾಟನಾ ಸಭೆ

ವಾರ್ತಾ ಭಾರತಿ : 13 Jan, 2018
Varthabharathi

ವಿಟ್ಲ, ಜ. 13: ಸ್ನೇಹ ಸಹಬಾಳ್ವೆ ಸೌಹಾರ್ದತೆಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.

ಪಾಣೆಮಂಗಳೂರು ಸಮೀಪದ ಬೋಳಂಗಡಿ ಮರ್‌ಹೂಂ ಪಿ.ಬಿ. ಹುಸೈನಬ್ಬ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ರುವ ಮದ್ರಸ ಉಮ್ಮುಲ್ ಕುರಾ ತಹ್‌ಫೀಝುಲ್ ಕುರಾನ್ ಇದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಲ್ಲ ಧರ್ಮದವರು ಅವರ ಧರ್ಮ ಗ್ರಂಥಾನುಸಾರ ಜೀವಿಸಿದರೆ ಸಮಾಜದಲ್ಲಿ ಅಶಾಂತಿ ಉದ್ಭವಿಸಲು ಸಾಧ್ಯವಿಲ್ಲ ಎಂದರು.

ಹಾಜಿ ಪಿ.ಬಿ. ಇಬ್ರಾಹಿಂ ಭಟ್ಕಳ ಮದ್ರಸದ ಉದ್ಘಾಟನಾ ಫಲಕ ಅನಾವರಣಗೊಳಿಸಿದರು. ಮಂಗಳೂರು ಇಖ್‌ರಅ್ ಅರಬಿಕ್ ಸ್ಕೂಲ್ ಪ್ರಾಂಶುಪಾಲ ಮೌಲಾನಾ ಸಾಲಿಮ್ ನದ್ವಿ ಮದ್ರಸ ಉದ್ಘಾಟಿಸಿದರು.

ಬೋಳಂಗಡಿ ಹವ್ವಾ ಜುಮ್ಮಾ ಮಸೀದಿ ಖತೀಬ್ ಮೌಲಾನಾ ಯಹ್ಯಾ ತಂಙಳ್, ದೇರಳಕಟ್ಟೆ ಮಸ್ಜಿದುರ್ರಹ್ಮಾನ್ ಖತೀಬ್ ಮೌಲಾನಾ ಝಿಯಾದ್ ನದ್ವಿ, ಇಮಾಮ್ ಕೌನ್ಸಿಲ್ ಅಧ್ಯಕ್ಷ ಮೌಲಾನಾ ಜಾಫರ್ ಸಾದಿಕ್ ಫೈಝಿ, ಉಳ್ಳಾಲ ಅಲ್-ಫುರ್ಖಾನ್ ಜುಮಾ ಮಸೀದಿ ಖತೀಬ್ ಮೌಲಾನಾ ಮುಸ್ತಫಾ ಧಾರಿಮಿ ಮೊದಲಾದವರು ಮಾತನಾಡಿದರು.

ಜಮಾಅತೆ ಇಸ್ಲಾಮಿ ಮಂಗಳೂರು ವಲಯ ಸಂಚಾಲಕ ಅಕ್ಬರಲಿ ಉಡುಪಿ ಅದ್ಯಕ್ಷತೆ ವಹಿಸಿದ್ದರು. ಮರ್‌ಹೂಂ ಪಿ.ಬಿ. ಹುಸೈನಬ್ಬ ಚಾರಿಟೇಬಲ್ ಟ್ರಸ್ಟ್ ಚಯರ್‌ಮೆನ್ ಪಿ.ಬಿ. ಅಬ್ದುಲ್ ಅಝೀರ್, ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬ್ ಮುಹಮ್ಮದ್ ಕುಂಞಿ. ಜಮಾತೆ ಇಸ್ಲಾಮೀ ಹಿಂದ್ ದ.ಕ ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ ಬಿ.ಎ. ಮುಹಮ್ಮದಲಿ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳಾದ ಜಲೀಲ್ ಮುಕ್ರಿ ಉಪ್ಪಿನಂಗಡಿ, ಹುಸೈನ್ ಕಾಟಿಪಳ್ಳ, ಎ.ಕೆ. ಕುಕ್ಕಿಲ, ಸಲೀಂ ಬೋಳಂಗಡಿ, ಅಶ್ರಫ್ ಅಪೋಲೋ ಕಲ್ಲಡ್ಕ, ಸತ್ತಾರ್ ಗೂಡಿನಬಳಿ ತಮ್ಮ ಕವನಗಳನ್ನು ವಾಚಿಸಿದರು. ಇಖ್‌ರಅ್ ವಿದ್ಯಾರ್ಥಿಗಳಿಂದ ಗಾಯನ ನಡೆಯಿತು.

ಸಂಸ್ಥೆಯ ಟ್ರಸ್ಟಿ ಡಿ.ಕೆ. ಇಬ್ರಾಹಿಂ ಸ್ವಾಗತಿಸಿ, ಕಾರ್ಯದರ್ಶಿ ಸಲೀಂ ಬೋಳಂಗಡಿ ವಂದಿಸಿದರು. ತೌಹಿದುರ್ರಹ್ಮಾನ್ ಕಿರಾಅತ್ ಪಠಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

 

Comments (Click here to Expand)