varthabharthi

ನಿಧನ

ಟಿ.ಎನ್.ಲಕ್ಷ್ಮಣರಾಜ್ ಅರಸ್

ವಾರ್ತಾ ಭಾರತಿ : 13 Jan, 2018
Varthabharathi

ಚಿಕ್ಕಮಗಳೂರು, ಜ.13: ತೇಗೂರು ಗ್ರಾಪಂ ಸದಸ್ಯ ಟಿ.ಎನ್.ಲಕ್ಷ್ಮಣರಾಜ್ ಅರಸ್(68) ಶನಿವಾರ ಬೆಳಿಗ್ಗೆ ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರಳ ಮತ್ತು ಸಜ್ಜನಿಕೆಗೆ ಹೆಸರಾಗಿದ್ದ ಲಕ್ಷ್ಮಣರಾಜ್ ಅರಸ್ ಹಿರಿಯ ಪಶುವೈದ್ಯ ಪರೀಕ್ಷರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿ ನಂತರವೂ ಹಗಲು ರಾತ್ರಿ ಎನ್ನದೇ ಹಳ್ಳಿಹಳ್ಳಿಗಳಿಗೆ ತೆರಳಿ ಜಾನುವಾರುಗಳ ಚಿಕಿತ್ಸೆ ಮಾಡುವ ಮೂಲಕ ಅಪಾರ ಜನ ಮನ್ನಣೆ ಗಳಿಸಿದ್ದರು.

ಜಿಲ್ಲಾ ಗೋಸೇವಾ ಸಮಿತಿಯ ಅಧ್ಯಕ್ಷ, ರಾಜ್ಯ ನಿವೃತ್ತ ನೌಕರರ ಸಂಘದ ಖಜಾಂಚಿ, ಜಿಲ್ಲಾ ಅರಸು ಸಂಘದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಗಲಿರುವ ಲಕ್ಷ್ಮಣ್‍ರಾಜ್ ಅರಸ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ತೇಗೂರು ಗ್ರಾಮದಲ್ಲಿ ನಡೆಯಲಿದೆ.

 

Comments (Click here to Expand)