varthabharthi

ಕರ್ನಾಟಕ

ಸಾಲಭಾದೆ: ರೈತ ಆತ್ಮಹತ್ಯೆ

ವಾರ್ತಾ ಭಾರತಿ : 13 Jan, 2018

ಆಲೂರು, ಜ. 13: ಸಾಲಭಾದೆ ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಕೆ.ಹೊಸಕೋಟೆ ಹೋಬಳಿ ಮಲ್ಲೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೆಡೆದಿದೆ.

ಗ್ರಾಮದ  ಪ್ರೇಮರಾಜ್ (55) ಎಂಬುವವರೆ ಮೃತ ದುರ್ದೈವಿಯಾಗಿದ್ದು   ಆಲೂರು ಪೋಲಿಸರು ಪ್ರಕರಣ ದಾಖಲಿಸಿ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಮೃತರಿಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದು ಇವರು ಬಾಗೆ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ 2.50 ಲಕ್ಷ ಸಾಲ ಮಾಡಿದ್ದು ಪಾಳ್ಯದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಡಮಾನವಾಗಿರಿಸಿದ್ದ 1.80.000 ಮೌಲ್ಯದ ಚಿನ್ನಾಭರಣ ಹರಾಜಿಗೆ ಬಂದಿದ್ದು, ಬ್ಯಾಂಕ್‍ನವರು ಸಹ ನೋಟಿಸ್ ನೀಡಿದರಿಂದ ಬೇಸತ್ತ ರೈತ ಮನೆಯ ಪಕ್ಕದ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ವಿಷ ಸೇವಿಸಿ ನರಳಾಡುತ್ತಿದ ಇವರನ್ನು ಮನೆಯವರು ಗ್ರಾಮಸ್ಥರ ಸಹಕಾರದೊಂದಿಗೆ ಹಾಸನದ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11 ಘಂಟೆಯ ಸಮಯದಲ್ಲಿ ಮೃತ ಪಟ್ಟಿದ್ದಾರೆ.

 ಕಳೆದ ಹಾಗೂ ಈ ವರ್ಷ ಬೆಳೆದ ಬೆಳೆ ಕೈ ಕೊಟ್ಟ ಕಾರಣ ಹಾಗೂ ಕಾಡಾನೆ ಹಾವಳಿಯಿಂದ ಬೆಳೆ ನಷ್ಟ ಅನುಭವಿಸಿದ ಕಾರಣ  ಸಾಲ ತೀರಿಸಲಾಗದೆ ಆತ್ಮಹತೈ ಮಾಡಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪಾಳ್ಯ ಹಾಗೂ ಕೆ.ಹೊಸಕೋಟೆ ಹೋಬಳಿಯಲ್ಲಿ ಕಳೆದ ಎರಡು ತಿಂಗಳ ಅಂತರರದಲ್ಲಿ ಮೂವರು ರೈತರು ಸಾಲಭಾದೆ ತಾಳಲಾರದೆ ಆತ್ಮಹತೈ ಮಾಡಿ ಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)