varthabharthi

ರಾಷ್ಟ್ರೀಯ

ಸುಪ್ರೀಂ ನ್ಯಾಯಾಧೀಶರ ಪತ್ರಿಕಾಗೋಷ್ಟಿ ಅಗತ್ಯವಿರಲಿಲ್ಲ : ಬಾರ್ ಕೌನ್ಸಿಲ್ ಟೀಕೆ

ವಾರ್ತಾ ಭಾರತಿ : 13 Jan, 2018
Varthabharathi

ಹೊಸದಿಲ್ಲಿ, ಜ.13: ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಪತ್ರಿಕಾಗೋಷ್ಟಿ ನಡೆಸಿದ್ದಾರೆ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಭಾರತೀಯ ವಕೀಲರ ಮಂಡಳಿ)ಟೀಕಿಸಿದೆ.

ಸರದಿಪಟ್ಟಿಯ ಕುರಿತ ಅಸಮಾಧಾನದಂತಹ ಸಣ್ಣ ವಿಷಯಕ್ಕೆ ಪತ್ರಿಕಾಗೋಷ್ಟಿ ಕರೆಯುವ ಅಗತ್ಯವಿರಲಿಲ್ಲ. ಸಾರ್ವಜನಿಕ ವೇದಿಕೆಗೆ ಇದನ್ನು ಎಳೆದುತರುವ ಬದಲು ಅಂತರಿಕವಾಗಿ ಬಗೆಹರಿಸಿಕೊಳ್ಳಬಹುದಿತ್ತು . ಒಮ್ಮತ ಮೂಡದಿದ್ದರೆ ಆಗ ಇತರ ನ್ಯಾಯಾಧೀಶರು ಅಥವಾ ಬಾರ್ ಕೌನ್ಸಿಲ್‌ನ ಸದಸ್ಯರು ವಿಷಯವನ್ನು ಬಗೆಹರಿಸಲು ಸಹಕರಿಸುತ್ತಿದ್ದರು. ಇಂತಹ ಕೃತ್ಯಗಳಿಂದ ನ್ಯಾಯಾಂಗ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂದು ಬಾರ್ ಕೌನ್ಸಿಲ್‌ನ ಅಧ್ಯಕ್ಷ ಮನನ್ ಕುಮಾರ್ ಮಿಶ್ರ ಹೇಳಿದ್ದಾರೆ.

ಶನಿವಾರ ಬಾರ್‌ಕೌನ್ಸಿಲ್ ಸಭೆ ನಡೆದಿದ್ದು ಈ ರೀತಿಯ ಘಟನೆ ಭವಿಷ್ಯದಲ್ಲಿ ಪುನರಾವರ್ತನೆಯಾಗದಂತೆ ತಡೆಯುವ ಕ್ರಮವಾಗಿ ರವಿವಾರ ಮುಖ್ಯ ನ್ಯಾಯಾಧೀಶ (ಸಿಜೆಐ)ಯವರನ್ನು ಹಾಗೂ ಇತರ ಹಿರಿಯ ನ್ಯಾಯಾಧೀಶರನ್ನು ಭೇಟಿಮಾಡುತ್ತೇವೆ ಎಂದು ಮಿಶ್ರ ತಿಳಿಸಿದರು.

 

Comments (Click here to Expand)