varthabharthi

ಬೆಂಗಳೂರು

ಲಾರಿ ಢಿಕ್ಕಿ: ಓರ್ವ ಮೃತ್ಯು

ವಾರ್ತಾ ಭಾರತಿ : 13 Jan, 2018
Varthabharathi

ಬೆಂಗಳೂರು, ಜ.13: ಶರವೇಗವಾಗಿ ಬಂದ ಲಾರಿಯೊಂದು ಮತ್ತೊಂದು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕ್ಲೀನರ್ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ವೇಲೂರಿನ ಲಾರಿ ಕ್ಲೀನರ್ ಪ್ರೇಮ್‌ಕುಮಾರ್ (25) ಎಂಬಾತ ಮೃತಪಟ್ಟಿದ್ದು, ಘಟನೆಯಲ್ಲಿ ಚಾಲಕ ಬಾಬು (25) ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

Comments (Click here to Expand)