varthabharthi

ರಾಷ್ಟ್ರೀಯ

ಇನ್ಫೋಸಿಸ್ ಅಧ್ಯಕ್ಷ ರಾಜೇಶ್ ಮೂರ್ತಿ ರಾಜೀನಾಮೆ

ವಾರ್ತಾ ಭಾರತಿ : 13 Jan, 2018

ಮುಂಬೈ, ಜ. 13: ಇನ್ಫೋಸಿಸ್ನ ಅಧ್ಯಕ್ಷ ರಾಜೇಶ್ ಮೂರ್ತಿ ವೈಯಕ್ತಿ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ 2018 ಜನವರಿ 31ರಿಂದ ಅನ್ವಯವಾಗಲಿದೆ ಎಂದು ಕಂಪೆನಿಯ ಪತ್ರಿಕಾ ಪ್ರಕಟನೆ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಸಲೀಲ್ ಪರೇಕ್ ಇನ್ಫೋಸಿಸ್‌ನ ಸಿಇಒ ಆಗಿ ನೇಮಕರಾದ ಬಳಿಕ ಉನ್ನತ ಮಟ್ಟದ ಅಧಿಕಾರಿಯೊಬ್ಬರು ರಾಜೀನಾಮೆ ನೀಡುತ್ತಿರುವುದು ಇದೇ ಮೊದಲು. ಮೂರ್ತಿ ಅವರು ನಿನಂದನ್ ಲೇಕಣಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 1990ರಲ್ಲಿ ನೇಮಕವಾಗಿದ್ದರು. ಅಲ್ಲಿಂದ ಇಲ್ಲಿವರೆಗೆ ಅವರು ಕಂಪೆನಿಗಾಗಿ ಕಾರ್ಯ ನಿರ್ವಹಿಸಿದ್ದರು.

 

Comments (Click here to Expand)