varthabharthi

ಕರಾವಳಿ

ಭಟ್ಕಳ: ಅಂತರ್ ಜಿಲ್ಲಾಮಟ್ಟದ ಗೊಂಡ ಬುಡಕಟ್ಟಿನ ಕಲಾಮೇಳ

ವಾರ್ತಾ ಭಾರತಿ : 13 Jan, 2018
Varthabharathi

ಭಟ್ಕಳ, ಜ. 13: ತಾಲ್ಲೂಕಿನ ಕಟಗಾರಪ್ಪ ಕೆಳಗಿನಕೇರಿಯ ಚೈತನ್ಯ ರಂಗಮಂದಿರದಲ್ಲಿ ಗೊಂಡ ಸಮಾಜದ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಇತ್ತೀಚೆಗೆ ಅಂತರ ಜಿಲ್ಲಾಮಟ್ಟದ ಗೊಂಡ ಬುಡಕಟ್ಟಿನ ಕಲಾಮೇಳ ನಡೆಯಿತು.

ಕಲಾಮೇಳವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಸೈಯದ್ ಝಮೀರುಲ್ಲಾ ಶರೀಫ್,ಬುಡಕಟ್ಟು ಜನಾಂಗವಾದ ಗೊಂಡ ಸಮಾಜ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದೆ. ಅವರ ಆಚಾರ, ವಿಚಾರಗಳು ಅಧ್ಯಯನಕ್ಕೆ ಯೋಗ್ಯವಾಗಿದೆ ಎಂದರು.

ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಬೆಂಗಳೂರು ಇದರ ಅಧ್ಯಕ್ಷ ಎಂ.ಕೃಷ್ಣಯ್ಯ ವಸ್ತು ಸಂಗ್ರಹಾಲಯ ಉದ್ಘಾಟಿಸಿದರು. ಗೊಂಡ ಸಮಾಜದ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಮಂಜು ಎಸ್.ಗೊಂಡ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂ. ಸ್ಥಾಯಿಸಮಿತಿ ಅಧ್ಯಕ್ಷ ವಿಷ್ಣು ಎಂ.ದೇವಾಡಿಗ, ನಿವೃತ್ತ ಶಿಕ್ಷಕ ಉಮೇಶ ಎಸ್. ಹೆಗಡೆ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ನಿರ್ದೇಶಕ ವೆಂಕಟೇಶ ಗೊಂಡ,ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾ ಶಾಖೆಯ ಅಧ್ಯಕ್ಷ ಮಾಸ್ತಿ ಎಂ.ಗೊಂಡ,ಗೊಂಡ ಸಮಾಜದ ಅಭಿವೃದ್ದಿ ಸಂಘದ ಅಧ್ಯಕ್ಷ ಮಂಜು ಎಂ.ಗೊಂಡ,ಮಂಜುನಾಥ ಎನ್.ಗೊಂಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಗೊಯ್ದ ಎಸ್. ಗೊಂಡ, ಸುಕ್ರ ಗೊಂಡ, ಲಕ್ಷ್ಮಣ ಗೊಂಡ, ದೇವೇಂದ್ರ ಗೊಂಡ ಸಹಕರಿಸಿದರು. ಕಲಾಮೇಳದ ಸಂಚಾಲಕ ರಾಮ ಎಂ. ಗೊಂಡ ಪ್ರಾಸ್ತಾವಿಕ ಮಾತನಾಡಿದರು. ಮಾಸ್ತಿ ಎಂ.ಗೊಂಡ ಸ್ವಾಗತಿಸಿದರು. ಚಂದ್ ಎಂ.ಗೊಂಡ ವಂದಿಸಿ, ಸವಿತಾ ಕೆ.ಗೊಂಡ ನಿರೂಪಿಸಿದರು.

 

Comments (Click here to Expand)