varthabharthi

ರಾಷ್ಟ್ರೀಯ

ಮಹಾದಾಯಿ ವಿವಾದ : ಕರ್ನಾಟಕದ ಕಾಲುವೆ ನಿರ್ಮಾಣ ಸ್ಥಳಕ್ಕೆ ಗೋವಾ ಸಚಿವರ ದಿಢೀರ್ ಭೇಟಿ

ವಾರ್ತಾ ಭಾರತಿ : 13 Jan, 2018
Varthabharathi

ಪಣಜಿ,ಜ.13: ಮಹಾದಾಯಿಯ ಉಪನದಿಗೆ ಕರ್ನಾಟಕದಲ್ಲಿ ಕಾಲುವೆಯೊಂದನ್ನು ನಿರ್ಮಿಸಲಾಗುತ್ತಿದೆ ಎಂದು ಗೋವಾ ಸರಕಾರವು ಆರೋಪಿಸಿದ್ದು, ರಾಜ್ಯದ ಜಲ ಸಂಪನ್ಮೂಲ ಸಚಿವ ವಿನೋದ ಪಾಳ್ಯೇಕರ್ ಅವರು ಶನಿವಾರ ಅಲ್ಲಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕರ್ನಾಟಕವು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕಣಕುಂಬಿಯಲ್ಲಿ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಪುನರಾರಂಭಿಸಿದೆ ಎಂದು ಗೋವಾ ಸರಕಾರವು ಶುಕ್ರವಾರ ಆರೋಪಿಸಿತ್ತು.

ಕರ್ನಾಟಕವು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದಕ್ಕೆ ಪುರಾವೆಯಾಗಿ ತನ್ನ ಬಳಿ ಛಾಯಾಚಿತ್ರಗಳೂ ಇವೆ ಎಂದು ಅದು ಹೇಳಿತ್ತು.

 

Comments (Click here to Expand)