varthabharthi

ರಾಷ್ಟ್ರೀಯ

ಶಾಲೆಯ ಶೌಚಾಲಯದ ಗೋಡೆ ಕುಸಿದು ವಿದ್ಯಾರ್ಥಿ ಮೃತ್ಯು

ವಾರ್ತಾ ಭಾರತಿ : 13 Jan, 2018

ಅಲಪ್ಪುಳ,ಜ.13: ಅಲಪ್ಪುಳ ಜಿಲ್ಲೆಯ ಕುಟ್ಟನಾಡ್‌ನಲ್ಲಿ ಸರಕಾರಿ ಅನುದಾನಿತ ಶಾಲೆಯ ಶೌಚಾಲಯದ ಗೋಡೆಯು ಕುಸಿದು ಬಿದ್ದ ಪರಿಣಾಮ ಆರರ ಹರೆಯದ ಬಾಲಕನೋರ್ವ ಮೃತಪಟ್ಟಿದ್ದಾನೆ.

ಎರಡನೇ ತರಗತಿಯಲ್ಲಿ ಓದುತ್ತಿದ್ದ ಸೆಬಾಸ್ಟಿಯನ್ ಎಂ.ಜೋಸೆಫ್ ಶುಕ್ರವಾರ ವಿರಾಮದ ವೇಳೆ ಶಾಲೆಯ ಶೌಚಾಲಯಕ್ಕೆ ತೆರಳಿದ್ದ ವೇಳೆ ಗೋಡೆ ಕುಸಿದು ಮೈಮೇಲೆಯೇ ಬಿದ್ದಿತ್ತು. ತಲೆಗೆ ಗಂಭೀರ ಗಾಯವಾಗಿದ್ದ ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ಶನಿವಾರ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)