varthabharthi

ಬೆಂಗಳೂರು

ಬೆಂಗಳೂರು: ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ವಾರ್ತಾ ಭಾರತಿ : 13 Jan, 2018
Varthabharathi

ಬೆಂಗಳೂರು, ಜ.13: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2017-18 ನೆ ಸಾಲಿನ ರಾಜ್ಯ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಅತ್ಯುತ್ತಮ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ ವಿಭಾಗದಿಂದ (ಡಿ.ವಿ ಗುಂಡಪ್ಪ ಪ್ರಶಸ್ತಿ) ಮಹದೇವಪ್ರಕಾಶ್ ಸಂಪಾದಕ, ಈ ಭಾನುವಾರ ಪತ್ರಿಕೆ, (ಎಂ. ನಾಗೇಂದ್ರರಾವ್ ಪ್ರಶಸ್ತಿ) ದೇಶಾದ್ರಿ ಶಿವಮೊಗ್ಗ, ಕನ್ನಡಪ್ರಭ, ಬೆಂಗಳೂರು, (ಹೆಚ್.ಎಸ್ ರಂಗಸ್ವಾಮಿ ಪ್ರಶಸ್ತಿ) ಆರ್.ಟಿ.ವಿಠಲಮೂರ್ತಿ, ಪತ್ರಕರ್ತ ಬೆಂಗಳೂರು, (ಮಿಂಚು ಶ್ರೀನಿವಾಸ್ ಪ್ರಶಸ್ತಿ) ವೈ.ಗ.ಜಗದೀಶ್, ಹಿರಿಯ ಪತ್ರಕರ್ತ, ಪ್ರಜಾವಾಣಿ ಆಯ್ಕೆಗೊಂಡಿದ್ದಾರೆ. ಇನ್ನುಳಿದಂತೆ (ಗರುಡನಗಿರಿ ನಾಗರಾಜ್ ಪ್ರಶಸ್ತಿ) ಗುಡಿಹಳ್ಳಿ ನಾಗರಾಜ್ ಹಿರಿಯ ಪತ್ರಕರ್ತ, (ಎಸ್.ವಿ ಜಯಶೀಲರಾವ್ ಪ್ರಶಸ್ತಿ) ವೀರಭದ್ರಪ್ಪಗೌಡ, ಪತ್ರಕರ್ತ, ಬಳ್ಳಾರಿ, (ಡಾ.ಎಂ.ಎಂ ಕಲಬುರ್ಗಿ ಪ್ರಶಸ್ತಿ) ಡಾ.ಸರಜೂ ಕಾಟ್ಕರ್, ಹಿರಿಯ ಪತ್ರಕರ್ತ ಬೆಳಗಾವಿ, (ಪಾಟೀಲ ಪುಟ್ಟಪ್ಪಪ್ರಶಸ್ತಿ) ಬಸವರಾಜಸ್ವಾಮಿ, ಸಂಪಾದಕರು, ಸುದ್ದಿಮೂಲ, ರಾಯಚೂರು.

ವಿಶೇಷ ಪ್ರಶಸ್ತಿಗಳು: (ಯಶೋದಮ್ಮ ಜಿ.ನಾರಾಯಣ ಪ್ರಶಸ್ತಿ) ಎಂ.ಎಚ್.ನೀಳಾ ಪರ್ತಕರ್ತೆ, (ಬದರಿನಾಥಹೊಂಬಾಳೆ ಪ್ರಶಸ್ತಿ) ಜಿ.ಆರ್.ಉದಯಕುಮಾರ್ ಇಂಡಿಯನ್ ಎಕ್ಸೃ್ಪ್ರೆಸ್, ಹಾಸನ, (ಪಿ.ಆರ್.ರಾಮಯ್ಯ ಸ್ಮಾರಕ ಪ್ರಶಸ್ತಿ) ಡಾ.ಕೆ.ಉಮೇಶ್ವರ್ ಹಿರಿಯ ಪತ್ರಕರ್ತ, ಬೆಂಗಳೂರು, (ಪಟೇಲ್ ಭೈರಹನುಮಯ್ಯ ಪ್ರಶಸ್ತಿ) ಮಾಯಾಶರ್ಮ, ವರದಿಗಾರ್ತಿ ಎನ್‌ಡಿಟಿವಿ ಬೆಂಗಳೂರು, ಕೆಂಚೇಗೌಡ ವಿಜಯ ಕರ್ನಾಟಕ, ರವಿಪ್ರಕಾಶ್ ಪ್ರಜಾವಾಣಿ, ಬಿ.ಆರ್.ವಿಶ್ವನಾಥ್, ಸಂಜೆವಾಣಿ ಬೆಂಗಳೂರು, (ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ) ಬಸವರಾಜ್ ಹವಾಲ್ದಾರ್, ಪ್ರಜಾವಾಣಿ ಸೇರಿದಂತೆ ಇನ್ನಿತರ ಪ್ರಮುಖರು ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಜ.20, 21 ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿರುವ 33ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಘದ ಅಧ್ಯಕ್ಷ ಎನ್.ರಾಜು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Comments (Click here to Expand)