varthabharthi

ಕರ್ನಾಟಕ

ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು : ಆರೆಸ್ಸೆಸ್ ಮುಖಂಡ ಹೊಸಬಾಳೆ ಸಹೋದರ ಪುತ್ರನ ಬಂಧನ

ವಾರ್ತಾ ಭಾರತಿ : 13 Jan, 2018

ಶಿರಸಿ, ಜ.13: ಜ.9ರಂದು ಆತ್ಮಹತ್ಯೆ ಮಾಡಿಕೊಂಡ ಅನಿತಾ ಗಣಪತಿ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಪತಿ ಗಣಪತಿ ನೀಡಿದ ದೂರಿನ ಮೇರೆಗೆ, ಆರೆಸ್ಸೆಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಸಹೋದರನ ಪುತ್ರ ಹರ್ಷ ಹೆಗಡೆ ಎಂಬಾತನನ್ನು ಶಿರಸಿ ಪೊಲೀಸರು ಸೊರಬದಿಂದ ಬಂಧಿಸಿ ಕರೆತಂದಿದ್ದಾರೆ.

ತನ್ನ ಪತ್ನಿಗೂ ಹರ್ಷ ಹೆಗಡೆಗೂ ಸಹ್ಯವಲ್ಲದ ಸಂಬಂಧವಿದ್ದು, ಅದರಿಂದಾಗಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಗಣಪತಿ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Comments (Click here to Expand)