varthabharthi

ಕ್ರೀಡೆ

ದ್ವಿತೀಯ ಟೆಸ್ಟ್: ಶತಕ ವಂಚಿತ ಮರ್ಕರಮ್, ಅಮ್ಲ

ವಾರ್ತಾ ಭಾರತಿ : 13 Jan, 2018
Varthabharathi

ಸೆಂಚೂರಿಯನ್, ಜ.13: ಪ್ರವಾಸಿ ಭಾರತ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನ ಮೊದಲ ದಿನ ದಕ್ಷಿಣ ಆಫ್ರಿಕ ತಂಡ ಅಗ್ರ ಸರದಿಯ ದಾಂಡಿಗರ ಉಪಯುಕ್ತ ಕೊಡುಗೆಯ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ.

ಸೂಪರ್‌ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕ 90 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 269 ರನ್ ಗಳಿಸಿದೆ.

ನಾಯಕ ಎಫ್‌ಡು ಪ್ಲೆಸಿಸ್ 25 ರನ್ ಮತ್ತು ಕೇಶವ್ ಮಹಾರಾಜ್ ಔಟಾಗದೆ 10 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ಆರಂಭಿಕ ದಾಂಡಿಗ ಏಡೆನ್ ಮರ್ಕರಮ್ 94 ರನ್, ಹಾಶೀಮ್ ಅಮ್ಲ 82 ರನ್, ಎಬಿಡಿ ವಿಲಿಯರ್ರ್ಸ್‌ 20ರನ್, ಡೀನ್ ಎಲ್ಗರ್ 31 ರನ್ ,ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಮತ್ತು ವೆರ್ನಾನ್ ಫಿಲ್ಯಾಂಡರ್ ಖಾತೆ ತೆರೆಯದೆ ನಿರ್ಗಮಿಸಿದ್ದಾರೆ.

ಭಾರತದ ಪರ ರವಿಚಂದ್ರನ್ ಅಶ್ವಿನ್ 90ಕ್ಕೆ 3 ಮತ್ತು ಇಶಾಂತ್ ಶರ್ಮಾ 32ಕ್ಕೆ 1 ವಿಕೆಟ್ ಪಡೆದಿದ್ದಾರೆ.

 

Comments (Click here to Expand)