varthabharthi

ರಾಷ್ಟ್ರೀಯ

ಶಿಕ್ಷಣ ಕಾರ್ಯಕ್ರಮದ ಭಾಷಣದಲ್ಲಿ ‘ರಾಜಕೀಯ’ : ಹಾರ್ದಿಕ್ ಪಟೇಲ್ ವಿರುದ್ಧ ಎಫ್‌ಐಆರ್ ದಾಖಲು

ವಾರ್ತಾ ಭಾರತಿ : 13 Jan, 2018

ಜಾಮ್‌ನಗರ್, ಜ. 13: ಎರಡು ತಿಂಗಳ ಹಿಂದೆ ಜಾಮ್‌ನಗರ ಜಿಲ್ಲೆಯ ಗ್ರಾಮವೊಂದರಲ್ಲಿ ಶಿಕ್ಷಣ ಹಾಗೂ ರೈತರ ಕಲ್ಯಾಣ ಕಾರ್ಯಕ್ರಮವೊಂದರಲ್ಲಿ ‘ರಾಜಕೀಯ’ ಭಾಷಣ ಮಾಡಿದ ಆರೋಪದಲ್ಲಿ ಪಾಟೀದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ದತ್ತಾರ್‌ಪುರ ಗ್ರಾಮದಲ್ಲಿ ಶಿಕ್ಷಣ ಹಾಗೂ ರೈತರ ಕಲ್ಯಾಣ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಲಾಗಿತ್ತು. ಆದರೆ, ಹಾರ್ದಿಕ್ ಪಟೇಲ್ ಭಾಷಣದ ಮೂಲಕ ಅದು ರಾಜಕೀಯ ಕಾರ್ಯಕ್ರಮವಾಗಿ ಬದಲಾವಣೆಯಾಗಿತ್ತು ಎಂದು ದೂರು ದಾಖಲಿಸಿದ ಜಾಮ್‌ನಗರ (ಗ್ರಾಮೀಣ) ಉಪ ವಿಭಾಗೀಯ ದಂಡಾಧಿಕಾರಿ ಆರ್.ಕೆ. ಪಟೇಲ್ ಹೇಳಿದ್ದಾರೆ.

ಜಾಮ್‌ನಗರ ಎ ವಿಭಾಗದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)