varthabharthi

ಕರಾವಳಿ

ಉಡುಪಿ: ಸಾರ್ವಜನಿಕ ಶೌಚಾಲಯ ಉದ್ಘಾಟನೆ

ವಾರ್ತಾ ಭಾರತಿ : 13 Jan, 2018

ಉಡುಪಿ, ಜ.13: ಉಡುಪಿ ನಗರಸಭೆ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ನಾರ್ತ್ ಶಾಲೆ ಬಳಿ ವಿಕಲಚೇತನರಿಗಾಗಿ 2013-14ನೇ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ ಸುಮಾರು 4.3 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಶೌಚಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯ ಶ್ಯಾಂಪ್ರಸಾದ್ ಕುಡ್ವ, ಗುತ್ತಿಗೆದಾರ ಪಿ.ಬಾಬು, ಯಜ್ಞೇಶ್ ಆಚಾರ್ಯ, ಆರೀಪ್ ಮಹಮ್ಮದ್, ಸಂತೋಷ್ ರಾವ್ ಉಪಸ್ಥಿತರಿದ್ದರು. ಪೌರಾಯುಕ್ತ ಡಿ.ಮಂಜುನಾಥಯ್ಯ ಸ್ವಾಗತಿಸಿ ನಗರಸಭಾ ಸದಸ್ಯ ಜನಾರ್ಧನ ಭಂಡಾರ್ಕರ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)