varthabharthi

ರಾಷ್ಟ್ರೀಯ

ಇಳಿಮುಖವಾಗುತ್ತಿರುವ ಸಂತಾನೋತ್ಪತ್ತಿ ದರ!

ವಾರ್ತಾ ಭಾರತಿ : 13 Jan, 2018

ಹೊಸದಿಲ್ಲಿ, ಜ. 13: ಹಿಂದೂ ಮುಸ್ಲಿಮರನ್ನು ಹೊರತುಪಡಿಸಿ 15ರಿಂದ 49ರ ವಯೋಮಾನದ ಮಹಿಳೆಯರಲ್ಲಿ ಫಲವಂತಿಕೆಯ ದರ ಇಳಿಕೆಯಾಗುತ್ತಿದೆ. 2004-05ರ ಸಮೀಕ್ಷೆ ಪ್ರಕಾರ ಹಿಂದೂಗಳ ಫಲವಂತಿಕೆ ದರ 2.8ರಿಂದ 2.1ಕ್ಕೆ ಇಳಿಕೆಯಾಗಿದೆ. ಇದು ತಲೆಮಾರಿನಿಂದ ತಲೆಮಾರಿಗೆ ಬದಲಾಗಿದೆ.

ಮುಸ್ಲಿಮ್ ಮಹಿಳೆಯರ ಫಲವಂತಿಕೆ ದರ 3.4ರಿಂದ 2.6ಕ್ಕೆ ಇಳಿಕೆಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-16ರ ಇತ್ತೀಚೆಗಿನ ಧರ್ಮಾಧರಿತ ದತ್ತಾಂಶ ಇದನ್ನು ತಿಳಿಸಿದೆ.

  ಜೈನ ಮಹಿಳೆಯರು ಅತೀ ಕಡಿಮೆ ಫಲವಂತಿಕೆ ಹೊಂದಿದ್ದಾರೆ. ಶೇ. 1.2 ಫಲವಂತಿಕೆ ಹೊಂದಿರುವ ಇವರು ಶಿಕ್ಷಣದಲ್ಲಿ ಅತ್ಯುಚ್ಚ ಸ್ಥಾನದಲ್ಲಿ ಇದ್ದಾರೆ. ಇವರ ಬಳಿಕ ಸಿಕ್ಖ್ (1.6), ಬೌದ್ಧರು, ನವ ಬೌದ್ಧರು (1.7) ಹಾಗೂ ಕ್ರಿಶ್ಚಿಯನ್ ಮಹಿಳೆಯರು ಅತೀ ಕಡಿಮೆ ಫಲವಂತಿಕೆ ಹೊಂದಿದ್ದಾರೆ. ಭಾರತದ ಒಟ್ಟು ಫಲವಂತಿಕೆ ದರ 2.2 ಎಂದು ವರದಿ ಹೇಳಿದೆ.

  ಹೆಚ್ಚು ಆದಾಯ ಹೊಂದಿರುವ ಗುಂಪಿನ ಮಹಿಳೆಯರ ಫಲವಂತಿಕೆ ದರ 1.5 ಇದ್ದರೆ, ಅತೀ ಕಡಿಮೆ ಆದಾಯ ಹೊಂದಿರುವ ಗುಂಪಿನ ಮಹಿಳೆಯರ ಫಲವಂತಿಕೆ ದರ 3.2 ಇದೆ. ಸಮಾಜಲ್ಲಿ ಅತೀ ಕೆಳಗೆ ಇರುವ ಪರಿಶಿಷ್ಟ ಪಂಗಡದ ಮಹಿಳೆಯರಲ್ಲಿ ಅತೀ ಹೆಚ್ಚು ಅಂದರೆ 2.5 ಫಲಂವತಿಕೆ ದರ ಇದೆ. ಪರಿಶಿಷ್ಟ ಜಾತಿ ಮಹಿಳೆಯರಲ್ಲಿ 2.2 ಫಲವಂತಿಕೆ ದರ, ಇತರ ಹಿಂದುಳಿದ ವರ್ಗದ ಮಹಿಳೆಯರಲ್ಲಿ 2.2 ಫಲವಂತಿಕೆ ದರ ಕಂಡು ಬಂದಿದೆ. ನಗರಗಳಲ್ಲಿ ಮೇಲ್ವರ್ಗದ ಮಹಿಳೆಯರಲ್ಲಿ ಅತೀ ಕಡಿಮೆ ಫಲವಂತಿಕೆ ದರ ಇದೆ. ಇಲ್ಲಿ ಮಹಿಳೆಯರ ಫಲವಂತಿಕೆ ದರ 1.9.

 ಮಹಿಳೆಯರ ಫಲವಂತಿಕೆಯಲ್ಲಿ ವಯಸ್ಸು ಕೂಡ ಪ್ರಧಾನ ಪಾತ್ರ ವಹಿಸುತ್ತದೆ. ಅಧಿಕ ವಯಸ್ಸಿನ ಮಹಿಳೆಯರಿಗೆ ಹೋಲಿಸಿದರೆ, ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಫಲವಂತಿಕೆ ದರ ಸರಾಸರಿ ಕಡಿಮೆ. ಇದರಿಂದಾಗಿ ಕಳೆದ ಎರಡು ದಶಕಗಳಲ್ಲಿ ಫಲವಂತಿಕೆ ದರ ಇಳಿಕೆ ಆಗಿದೆ.

40-49 ಪ್ರಾಯದ ಮುಸ್ಲಿಂ ಮಹಿಳೆಯರಲ್ಲಿ ಒಟ್ಟು ಫಲವಂತಿಕೆ ದರ ಅತ್ಯಧಿಕ ಅಂದರೆ 4.2 ಇದೆ. ಜೈನ ಮಹಿಳೆಯರಲ್ಲಿ ಫಲವಂತಿಕೆ ದರ ಅತೀ ಕಡಿಮೆ 2.2 ಇದೆ. ಈ ಪ್ರಾಯದ ಗುಂಪಿನಲ್ಲಿ ಫಲವಂತಿಕೆ ದರ ಹಿಂದೂ ಮಹಿಳೆಯರಲ್ಲಿ ಎರಡನೇ ಅತ್ಯಧಿಕ ಅಂದರೆ 2.2 ಇದೆ.

 25-49 ವಯಸ್ಸಿನ ನಡುವಿನ ಮುಸ್ಲಿಂ ಮಹಿಳೆಯರಲ್ಲಿ ಮೊದಲ ಜನನ ಅತೀ ಸಣ್ಣ ಪ್ರಾಯಕ್ಕೆ ಆಗುತ್ತದೆ. ಮುಸ್ಲಿಂ ಮಹಿಳೆಯರಲ್ಲಿ 21.3 ವಯಸ್ಸಿಗೆ ಮೊದಲ ಜನನ ಆದರೆ, ಹಿಂದೂ ಮಹಿಳೆಯರಲ್ಲಿ ಮೊದಲ ಜನನ 21.6 ವಯಸ್ಸಿಗೆ ಆಗುತ್ತಿದೆ. ಸಿಕ್ಖ್ ಮಹಿಳೆಯರಲ್ಲಿ ಅತೀ ಹೆಚ್ಚು ವಯಸ್ಸಿನಲ್ಲಿ ಮೊದಲ ಜನನ ಆಗುತ್ತದೆ. ಸಿಕ್ಖ್ ಮಹಿಳೆಯರಲ್ಲಿ ಮೊದಲ ಜನನ 23.8 ವರ್ಷಕ್ಕೆ ಆಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)