varthabharthi

ಕರಾವಳಿ

ಉಡುಪಿ: ಬ್ರಾಹ್ಮಣ ಮಹಾಸಭಾದಿಂದ ವಿಷ್ಣು ಸಹಸ್ರನಾಮ ಪಾರಾಯಣ

ವಾರ್ತಾ ಭಾರತಿ : 13 Jan, 2018
Varthabharathi

ಉಡುಪಿ, ಜ.13: ತಾಲೂಕು ಬ್ರಾಹ್ಮಣ ಮಹಾಸಭಾದ 32 ವಲಯ ಹಾಗೂ ಇತರ ಎಲ್ಲಾ ಬ್ರಾಹ್ಮಣ ವರ್ಗಗಳ ಸಹಯೋಗದಲ್ಲಿ ಮಕರ ಸಂಕ್ರಾಂತಿಯ ಪರ್ವಕಾಲ ಜ.14ರಂದು ನವೀಕರಣಗೊಂಡ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪ್ರಥಮ ಧಾರ್ಮಿಕ ಕಾರ್ಯಕ್ರಮವಾಗಿ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಬೆಳಗ್ಗೆ 8:30 ರಿಂದ 11 ಗಂಟೆಯ ವರೆಗೆ ನಡೆಯಲಿದೆ.

ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಹಾಗೂ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಂ.ಮಂಜುನಾಥ ಉಪಾಧ್ಯ ಈ ವಿಷಯ ತಿಳಿಸಿದರು.

ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಸಂಕಲ್ಪ ಹಾಗೂ ಬಯಕೆಯಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಬ್ರಾಹ್ಮಣ ಸಮಾಜದ ಎಲ್ಲಾ ವರ್ಗಗಳ ವಿಪ್ರಕರಎು ಮತ್ತು ಮಹಿಳೆಯರು ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಕೊರಂಗ್ರಪಾಡಿಯ ಪಾವನ ಪರಿಷತ್‌ನ ನೇತೃತ್ವದಲ್ಲಿ ಕೊರಂಗ್ರಪಾಡಿಯ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ರವಿವಾರ ಬೆಳಗ್ಗೆ 6:30 ರಿಂದ ಸಂಜೆ 6 ರ ವರೆಗೆ ನಡೆಯುವ ಶ್ರೀವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ಎಲ್ಲರೂ ಭಾಗವಹಿಸುವಂತೆ ಅವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದ ಪದಾಧಿಕಾರಿ ಗಳಾದ ಕೆ.ವೆಂಕಟರಮಣ ಭಟ್, ಶಾಂತಾರಾಮ್ ಭಟ್, ಕೆ.ಶ್ರೀಕಾಂತ ಉಪಾದ್ಯ, ಎಂ.ಶ್ರೀನಿವಾಸ ಬಲ್ಲಾಳ್ ಹಾಗೂ ಕೆ.ರಾಮದಾಸ ಉಡುಪ ಉಪಸ್ಥಿತರಿದ್ದರು.

 

Comments (Click here to Expand)