varthabharthi

ಅಂತಾರಾಷ್ಟ್ರೀಯ

ಶೆರಿನ್ ಪ್ರಕರಣ : ದತ್ತು ತಂದೆ ವಿರುದ್ಧ ಕೊಲೆ ಆರೋಪ ದಾಖಲು

ವಾರ್ತಾ ಭಾರತಿ : 13 Jan, 2018

ಹ್ಯೂಸ್ಟನ್,ಜ.13: ಕಳೆದ ವರ್ಷ ಡಲ್ಲಾಸ್‌ನ ಹೊರವಲಯದಲ್ಲಿ ನಿಗೂಢವಾಗಿ ಮೃತಪಟ್ಟ 3 ವರ್ಷ ವಯಸ್ಸಿನ ಭಾರತೀಯ ಮೂಲದ ಬಾಲಕಿ ಶೆರಿನ್ ಮ್ಯಾಥ್ಯೂಸ್‌ಳ ಸಾಕುತಂದೆಯ ವಿರುದ್ಧ ಇಲ್ಲಿನ ನ್ಯಾಯಾಧೀಶರು ಕೊಲೆ ಆರೋಪವನ್ನು ದಾಖಲಿಸಿದ್ದಾರೆ.

 ಅಕ್ಟೋಬರ್ 7ರಂದು ನಾಪತ್ತೆಯಾಗಿದ್ದ ಶೆರಿನ್‌ಳ ಮೃತ ದೇಹವು ಆಕೆಯ ಮನೆಯಿಂದ 1 ಕಿ.ಮೀ. ದೂರದ ಚರಂಡಿಯೊಂದರಲ್ಲಿ ಕಾಲುಸೇತುವೆಯಡಿ ಪತ್ತೆಯಾಗಿತ್ತು.

‘‘ಶೆರಿನ್‌ಳ ಸಾವಿನ ಕುರಿತ ವಿವರಗನ್ನು ನೀಡಲು ಸಾಧ್ಯವಿಲ್ಲವಾದರೂ, ಮೃತದೇಹದ ಪರೀಕ್ಷೆಯ ಆಧಾರದಲ್ಲಿ ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕೊಲೆಯ ಆರೋಪವನ್ನು ಹೊರಿಸಬಹುದಾಗಿದೆಯೆಂದು ಡಲ್ಲಾಸ್ ಕೌಂಟಿ ಜಿಲ್ಲೆಯ ಅಟಾರ್ನಿ ಫೇತ್ ಜಾನ್ಸನ್ ತಿಳಿಸಿದ್ದಾರೆ.

ಮೃತ ಬಾಲಕಿಯ ದತ್ತು ತಂದೆಯ ವಿರುದ್ಧ ಮಗುವನ್ನು ತೊರೆದು ಹೋದ ಹಾಗೂ ಸಾಕ್ಷಾಧಾರಗಳನ್ನು ತಿರುಚಿದ ಆರೋಪವನ್ನು ಕೂಡಾ ಹೊರಿಸಲಾಗಿದೆ.

 ಶೆರಿನ್ ಹಾಲುಕುಡಿಯದೆ ಇದ್ದುದಕ್ಕಾಗಿ ಆಕೆಯನ್ನು ಮುಂಜಾನೆ 3:00 ಗಂಟೆಯ ವೇಳೆಗೆ ಮನೆಯ ಹೊರಗೆ ತಾನು ನಿಲ್ಲಿಸಿದ್ದಾಗಿಯೂ, ಆನಂತರ ಆಕೆ ನಿಗೂಢವಾಗಿ ನಾಪತ್ತೆಯಾಗಿದ್ದಾಗಿ ಆಕೆಯ ಸಾಕುತಂದೆ ವೆಸ್ಲಿ ಆರಂಭದಲ್ಲಿ ಪೊಲೀಸರಿಗೆ ತಿಳಿಸಿದ್ದನು.

ವೆಸ್ಲಿಯ ಪತ್ನಿ 35 ವರ್ಷ ವಯಸ್ಸಿನ ಸಿನಿ ಮ್ಯಾಥ್ಯೂಸ್ ಕೂಡಾ ಬಂಧನದಲ್ಲಿರಿಸಲಾಗಿದೆ. ಸಿನಿ ತನ್ನ ಪತಿ ಹಾಗೂ ಇನ್ನೋರ್ವ ಮಗಳೊಂದಿಗೆ ಹೊರಗೆ ಭೋಜನಕ್ಕೆ ತೆರಳಿದ್ದಾಗ, ಶೆರಿನ್‌ಳನ್ನು ಮನೆಯಲ್ಲಿ ಏಕಾಂಗಿಯಾಗಿರಿಸುವ ಮೂಲಕ ಮಗವನ್ನು ಅಪಾಯಕ್ಕೊಡ್ಡಿದ ಹಾಗೂ ತೊರೆದ ಆರೋಪವನ್ನು ಆಕೆಯ ಮೇಲೆ ಹೊರಿಸಲಾಗಿದೆ ಹಾಗೂ 1 ಲಕ್ಷ ಡಾಲರ್‌ಗಳ ಮುಚ್ಚಳಿಕೆಯನ್ನು ನೀಡುವಂತೆಯೂ ಆಕೆಗೆ ಆದೇಶಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)