varthabharthi

ಬೆಂಗಳೂರು

ಬೆಂಗಳೂರು: ಜ.15ರಂದು ತಿರುವಳ್ಳ್ಳುವರ್ ಜಯಂತಿ

ವಾರ್ತಾ ಭಾರತಿ : 13 Jan, 2018
Varthabharathi

 ಬೆಂಗಳೂರು, ಜ. 13: ವಿಶ್ವಕವಿ ತಿರುವಳ್ಳ್ಳುವರ್ ಜಯಂತಿ ಆಚರಣೆ ಸಮಿತಿಯ ವತಿಯಿಂದ ನಗರದ ಅಲಸೂರು ಕೆರೆ ತಿರುವಳ್ಳ್ಳುವರ್ ಪ್ರತಿಮೆ ಬಳಿ ಜ.15ರಂದು ಬೆಳಗ್ಗೆ 10ಕ್ಕೆ ತಿರುವಳ್ಳವರ್ ಜಯಂತಿ ಕಾರ್ಯಕ್ರಮ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಡಿಕೆ.ಶಿವಕುಮಾರ್, ಮೇಯರ್ ಸಂಪತ್‌ರಾಜ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಿರುನಾವುಕರಸ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಹಾಗೂ ರವಿಶಂಕರ್ ಗುರೂಜಿ, ಆನಂದ್ ಗುರೂಜಿ, ನಿತ್ಯಾನಂದ ಸ್ವಾಮೀಜಿ, ಶಾಂತವೀರ ಮಹಾ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆಂದು ವಿಶ್ವಕವಿ ತಿರುವಳ್ಳವರ್ ಜಯಂತಿ ಆಚರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪ್ರಕಾಸಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Comments (Click here to Expand)