ತೆರಿಗೆ ತಪ್ಪಿಸುವ ದೇಶಗಳ ಐರೋಪ್ಯ ಪಟ್ಟಿಯಿಂದ ಪನಾಮ ಹೊರಗೆ
ಬ್ರಸೆಲ್ಸ್, ಜ. 16: ತೆರಿಗೆ ತಪ್ಪಿಸುವವರಿಗೆ ಆಶ್ರಯ ನೀಡುವ ದೇಶಗಳ ಕಪ್ಪುಪಟ್ಟಿಯಿಂದ ಪನಾಮ, ದಕ್ಷಿಣ ಕೊರಿಯ ಮತ್ತು ಇತರ ಆರು ದೇಶಗಳನ್ನು ಹೊರಗಿಡಲು ಐರೋಪ್ಯ ಒಕ್ಕೂಟ ತೀರ್ಮಾನಿಸಿದೆ.
ಮುಂದಿನ ವಾರ ನಡೆಯಲಿರುವ ಐರೋಪ್ಯ ಒಕ್ಕೂಟ ಹಣಕಾಸು ಸಚಿವರ ಸಭೆಯಲ್ಲಿ ಈ ಸಂಬಂಧ ನಿರ್ಣಯವೊಂದನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
ಯುಎಇ, ಟ್ಯನೀಶಿಯ, ಮಂಗೋಲಿಯ, ಮಕಾವು, ಗ್ರೆನಡ ಮತ್ತು ಬಾರ್ಬಡೋಸ್ ಪಟ್ಟಿಯಿಂದ ಹೊರಬೀಳಲಿರುವ ಇತರ ದೇಶಗಳು.
Next Story