ಜೂ.14ಕ್ಕೆ ಬೆಂಗಳೂರಿನಲ್ಲಿ ಭಾರತ-ಅಫ್ಘಾನ್ ಐತಿಹಾಸಿಕ ಟೆಸ್ಟ್
ಹೊಸದಿಲ್ಲಿ, ಜ.16: ಟೀಮ್ಇಂಡಿಯಾ ಜೂ.14 ರಿಂದ 18ರ ತನಕ ಬೆಂಗಳೂರಿನಲ್ಲಿ ಮೊದಲ ಬಾರಿ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಿದೆ. ಬಿಸಿಸಿಐ ಹಾಗೂ ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಮಂಗಳವಾರ ನಡೆಸಿದ ಸಭೆಯ ವೇಳೆ ಈ ನಿರ್ಧಾರ ಕೈಗೊಂಡರು. ಅಫ್ಘಾನಿಸ್ತಾನ ಕಳೆದ ವರ್ಷದ ಜೂನ್ನಲ್ಲಿ ಐರ್ಲೆಂಡ್ನೊಂದಿಗೆ ಐಸಿಸಿ ಟೆಸ್ಟ್ ಸ್ಥಾನಮಾನವನ್ನು ಪಡೆದಿತ್ತು. ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ ಐಸಿಸಿಯಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದಿದ್ದು, ಕ್ರಮವಾಗಿ 11ನೇ ಹಾಗೂ 12ನೇ ಟೆಸ್ಟ್ ದೇಶವಾಗಿ ಮಾನ್ಯತೆ ಪಡೆದಿವೆ.
Next Story