ವೋಝ್ನಿಯಾಕಿ, ಒಸ್ಟಾಪೆಂಕೊಗೆ ಜಯ
ಆಸ್ಟ್ರೇಲಿಯನ್ ಓಪನ್
ಮೆಲ್ಬೋರ್ನ್, ಜ.17: ಆಸ್ಟ್ರೇಲಿಯನ್ ಓಪನ್ನ ಮಹಿಳೆಯರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಕರೊಲಿನ್ ವೋಝ್ನಿಯಾಕಿ ಕ್ರೊಯೇಷಿಯದ 119ನೇ ರ್ಯಾಂಕಿನ ಜಾನಾ ಫೆಟ್ರನ್ನು 3-6, 6-2, 7-5 ಸೆಟ್ಗಳ ಅಂತರದಿಂದ ಸೋಲಿಸಿದರು. ಈ ಮೂಲಕ ಮೂರನೇ ಸುತ್ತಿಗೆ ತೇರ್ಗಡೆಯಾದರು.
ಚೀನಾದ ಡುಯನ್ ಯಿಂಗ್ಯಿಂಗ್ರನ್ನು 6-3, 3-6, 6-4 ಸೆಟ್ಗಳಿಂದ ಮಣಿಸಿದ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ ಮೂರನೇ ಸುತ್ತಿಗೆ ತಲುಪಿದರು. ಎರಡನೇ ಸುತ್ತಿನ ಪಂದ್ಯದಲ್ಲಿ ಫ್ರೆಂಚ್ನ ಅಲಿಝ್ ಕೊರ್ನೆಟ್ ವಿರುದ್ಧ 4-6, 3-6 ಸೆಟ್ಗಳಿಂದ ಸೋತಿರುವ ಜುಲಿಯಾ ಜಾರ್ಜಸ್ ಅವರ 15 ಪಂದ್ಯಗಳ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.
42ನೇ ರ್ಯಾಂಕಿನ ಕೊರ್ನೆಟ್ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ ಡರಿಯಾ ಗಾವ್ರಿಲೋವಾ ಅಥವಾ ಎಲಿಸ್ ಮೆರ್ಟಿನ್ಸ್ರನ್ನು ಎದುರಿಸಲಿದ್ದಾರೆ.
Next Story