ಭಾರತದ ಕ್ರಿಕೆಟಿಗರಿಗೆ ‘2 ನಿಮಿಷ ಮಾತ್ರ ಸ್ನಾನ ಮಾಡಿ’ ಎಂದಿದ್ದಾರೆ ದ.ಆಫ್ರಿಕಾದ ಅಧಿಕಾರಿಗಳು!
ಕಾರಣವೇನು ಗೊತ್ತಾ?
ಕೇಪ್ ಟೌನ್, ಜ.19: ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾಗೆ ತೆರಳಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ‘ತಂಡದ ಸದಸ್ಯರು 2 ನಿಮಿಷಗಳ ಕಾಲ ಮಾತ್ರ ಸ್ನಾನ ಮಾಡಬೇಕು’ ಎಂದು ಇಲ್ಲಿನ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ. ಇದು ಭಾರತ ತಂಡದ ಮೇಲಿನ ಕೋಪದಿಂದಲ್ಲ ಬದಲಾಗಿ ನೀರಿನ ಕೊರತೆಯಿಂದ.
ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನ ಜನರು ಇನ್ನು ಕೇವಲ 100 ದಿನಗಳ ಕಾಲ ಮಾತ್ರ ನೀರನ್ನು ಉಪಯೋಗಿಸಬಹುದಾಗಿದೆ. 100 ದಿನಗಳ ನಂತರ ಅಂದರೆ 2018ರ ಎಪ್ರಿಲ್ 21ರಂದು ಇಲ್ಲಿ ನೀರು ಸಂಪೂರ್ಣ ಆವಿಯಾಗಲಿದೆ. ಕೇಪ್ ಟೌನ್ ನಲ್ಲಿ ಆ ನಂತರ ಟ್ಯಾಪ್ ಗಳಲ್ಲಿ ನೀರು ಬರದೆ ಹಾಹಾಕಾರ ಉಂಟಾಗಬಹುದು ಎಂದು ಹೇಳಲಾಗಿದೆ.
ಎಪ್ರಿಲ್ 21ರ ನಂತರ ನೀರಿಗಾಗಿ ಜನರು ಸಾಲುಗಳಲ್ಲಿ ನಿಲ್ಲಬೇಕಾಗಬಹುದು. ಎಪ್ರಿಲ್ 21 ನಂತರ ಪ್ರತಿದಿನ ಮನೆಯೊಂದಕ್ಕೆ 25 ಲೀಟರ್ ನೀರು ಸರಬರಾಜು ಮಾಡಲಾಗುತ್ತದೆ. ಅದೂ ಕೂಡ ಸಾಲುಗಳಲ್ಲಿ ನಿಂತು ನೀರು ಪಡೆಯಬೇಕಾಗಿದೆ.
ಅಣೆಕಟ್ಟೆಯ ನೀರಿನ ಪ್ರಮಾಣವು ಇತ್ತಿಚಿನ ವಾರಗಳಲ್ಲಿ 28.7 ಶೇ.ದಷ್ಟು ಕುಸಿದಿದೆ. ಉಳಿದ ನೀರಿನಲ್ಲಿ 18.7 ಶೇ. ನೀರನ್ನು ಬಳಸಬಹುದು.